ದಾವಣಗೆರೆ: ಸಾಹಿತ್ಯದಿಂದ ನಮ್ಮನಾಡಿನ ಕನ್ನಡದ ಬೇರುಗಳು ವಿಶ್ವದೆಲ್ಲೆಡೆ ಹರಡುವಂತೆ ಮಾಡಿದ ಮಹಾನ್ ಚೇತನ ಕುವೆಂಪು. ಅವರು ಹುಟ್ಟಿದನಾಡಿನಲ್ಲಿ ನಾವು ಹುಟ್ಟಿರುವುದೇ ನಮ್ಮಪುಣ್ಯ ಎಂದು ಹಿರಿಯ ಸಾಹಿತಿ, ಕನ್ನಡಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರೊ| ಎಸ್.ಬಿ. ರಂಗನಾಥ್ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ದಾವಣಗೆರೆ ವಿಜ್ಞಾನ ಕೇಂದ್ರ, ಯುವಸ್ಪಂದನ ಕೇಂದ್ರ ಏರ್ಪಡಿಸಿದ್ದಕುವೆಂಪು ಜಯಂತಿ ಹಾಗೂ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಗದ ಕವಿ, ಯುಗದ ಕವಿ, ವಿಶ್ವಮಾನವ ಸಂದೇಶ ಸಾರಿದ ಕವಿಕುವೆಂಪು ಅವರ ಸಾಹಿತ್ಯದ ಅಧ್ಯಯನ ಸಕ್ಕರೆ ಮಿಠಾಯಿ ಸವಿದಂತೆ. ಕುವೆಂಪುಹೆಸರು ಕೇಳಿದರೆ ಹೇಳಿದರೆ ಮೈರೋಮಾಂಚನವಾಗುತ್ತದೆ. ಅವರುಅನೇಕ ಕವನಗಳಲ್ಲಿ ಪದಗಳ ಜೊತೆಆಟವಾಡಿದ್ದಾರೆ. ಅದರ ಮೂಲಕಸಾಹಿತ್ಯದ ರಸದೌತಣ ನೀಡಿದ್ದಾರೆ.ಜನರು ಸಾಮಾಜಿಕ ಬದುಕಿನಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಸಮ ಸಮಾಜದ ಕನಸು ಹೊತ್ತು ಸಾಗಬೇಕು ಎಂದು ಸಾರಿದ್ದಾರೆ ಎಂದರು.
ತಾಪಂ ಕಾರ್ಯನಿರ್ವಾ ಹಣಾಧಿಕಾರಿ ಬಿ.ಎಂ. ದಾರುಕೇಶ್ ಮಾತನಾಡಿ, ಕುವೆಂಪುರವರು ಕರ್ನಾಟಕಕ್ಕೆ ಮಾತ್ರ ಸೀಮಿತ ವಾಗಿಲ್ಲ. ವಿಶ್ವದೆಲ್ಲೆಡೆ ಅವರಸಾಹಿತ್ಯಾಭಿಮಾನಿಗಳಿದ್ದಾರೆ. ಪ್ರಚಲಿತ ವಿದ್ಯಮಾನಗಳೊಂದಿಗೆ ಹೊಂದಿಕೊಂಡುಪ್ರಕೃತಿ ಸಹಜಜೀವನ ನಡೆಸಬೇಕೆಂದು ಕರೆ ಕೊಟ್ಟ ಮೇರು ಸಾಹಿತಿ ಕುವೆಂಪು ಅವರಾಗಿದ್ದಾರೆ ಎಂದು ಬಣ್ಣಿಸಿದರು.
ಕುಂದವಾಡ ಸರ್ಕಾರಿ ಪಪೂಕಾಲೇಜಿನ ಉಪನ್ಯಾಸಕ ಅಂಗಡಿ ಸಂಗಪ್ಪ,ವಿಶ್ವಮಾನವ ಮಂಟಪದ ಆವರಗೆರೆರುದ್ರಮುನಿ, ಯುವ ಸ್ಪಂದನ ಕೇಂದ್ರದಎಸ್.ಬಿ. ಶಿಲ್ಪಾ ಮಾತನಾಡಿದರು.ಎಂ.ಎಂ. ಕಾಲೇಜು ಪ್ರಾಚಾರ್ಯಡಾ| ಕೆ.ಟಿ. ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.