Advertisement

ಕುವೆಂಪು ಸಂದೇಶ ವಿಶ್ವಕ್ಕೆ ಪಸರಿಸಲು ಶ್ರಮಿಸಿ: ಮರದ

04:00 PM Dec 30, 2020 | Team Udayavani |

ಗಜೇಂದ್ರಗಡ: ಜಾತಿ, ಮತ, ಪಂಥ, ವರ್ಗಗಳನ್ನು ಕಿತ್ತೆಸೆದು ಮನುಜ ಮತ ಸಾರಿದ ವಿಶ್ವ ಮಾನವ ಕುವೆಂಪು ಅವರಸಂದೇಶವನ್ನು ವಿಶ್ವಕ್ಕೆ ಪಸರಿಸಲು ಯುವಸಮೂಹ ಮುಂದಾಗಬೇಕೆಂದುಪ್ರಾಚಾರ್ಯ ವಿ.ಬಿ. ಮರದ ಹೇಳಿದರು.

Advertisement

ಪಟ್ಟಣದ ಎಸ್‌.ಎಂ. ಭೂಮರಡ್ಡಿಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿಮಂಗಳವಾರ ನಡೆದ ರಾಷ್ಟ್ರಕವಿ ಕುವೆಂಪುಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ರಾಷ್ಟ್ರಕವಿ ಕುವೆಂಪು ಅವರನಾಡಾಭಿಮಾನ ಅಮೋಘವಾದದ್ದು. ಕುವೆಂಪು ಹೇಳಿದ ಮಂತ್ರಮಾಂಗಲ್ಯ, ಸರಳ ವಿವಾಹ ಕ್ರಮಗಳುಒಂದು ಕಾಲಘಟ್ಟದ ತರುಣರನ್ನುಪ್ರಭಾವಿಸಿತ್ತು. ಕುವೆಂಪು ತಮ್ಮ ಕಾವ್ಯ,ನಾಟಕ, ಕಥೆ, ಲೇಖನಗಳ ಮೂಲಕ ಬೋಧಿಸಿದ್ದಾರೆ. ಶೋಷಣೆ ಮುಕ್ತ ಸಮಾಜದ ಅಗತ್ಯತೆಯನ್ನು ವಿಶ್ವಮಾನವನಾಗುವುದೆಂದರೆ ಯಾವಬಂಧನಗಳಲ್ಲದೆ ಹೊರಬರುವುದು.ಅವರ ಬರಹಗಳ ತಾತ್ವಿಕತೆ, ದೀನ,ದಲಿತರ ಜಾಗೃತಿಗೆ ಮೊರೆ ಇಟ್ಟರೆ, ಉಳ್ಳವರ ಆತ್ಮ ವಿಮರ್ಶೆಗೆ ಕರೆ ಕೊಡುತ್ತದೆ ಎಂದರು.

ಉಪನ್ಯಾಸಕ ಎಸ್‌.ಕೆ. ಕಟ್ಟಿಮನಿ ಮಾತನಾಡಿ, ಕುವೆಂಪು ಅವರು ರಸಋಷಿ ಕವಿ, ವಿಶ್ವಮಾನವ, ಕನ್ನಡದಲ್ಲಿಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದಮಹಾನ್‌ ಚೇತನರಾಗಿದ್ದಾರೆ. ಕನ್ನಡಭಾಷೆ, ನೆಲ, ಜಲದ ಬಗ್ಗೆ ಕನ್ನಡಿಗರನರನಾಡಿಗಳಲ್ಲೂ ಕನ್ನಡತನವನ್ನು ಬಡಿದೆಬ್ಬಿಸಿದ ಕವಿ. ಈ ದಿಸೆಯಲ್ಲಿಕುವೆಂಪು ಅವರ ಆದರ್ಶಗಳು ದಾರಿದೀಪವಾಗಿವೆ ಎಂದರು.

ಎಸ್‌.ಎಸ್‌. ಚುಂಚಾ, ಬಿ.ವಿ.ಮುನವಳ್ಳಿ, ಎಲ್‌.ಕೆ.ವದ್ನಾಳ,ಕೆ.ಹಿರೇಮಠ, ಬಿ.ಇ.ಹಡಪದ ಇನ್ನಿತರರು ಉಪಸ್ಥಿತರಿದ್ದರು.

Advertisement

ಡಿಸಿ ಕಚೇರಿಯಲ್ಲಿ ಕುವೆಂಪು ಜನ್ಮದಿನ :

ಗದಗ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತಭವನದ ಸಭಾಂಗಣದಲ್ಲಿ ಮಂಗಳವಾರರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದಅಂಗವಾಗಿ ವಿಶ್ವ ಮಾನವ ದಿನಾಚರಣೆ ಆಚರಿಸಲಾಯಿತು.

ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬುಅವರು ರಾಷ್ಟ್ರಕವಿ ಕುವೆಂಪು ಅವರಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಮೂಲಕ ಗೌರವ ಸಮರ್ಪಿಸಿದರು. ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಹಾಯಕನಿರ್ದೆಶಕ ವೀರಯ್ಯಸ್ವಾಮಿ ಹಿರೇಮಠ,ನಿರ್ಮಿತಿ ಕೇಂದ್ರದ ಯೋಜನಾವ್ಯವಸ್ಥಾಪಕ ಶಿರೋಳ ಸೇರಿದಂತೆ ಗಣ್ಯರುವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next