Advertisement
ಕನ್ನಡ ಭಾಷೆ ಎಂದಾಗ ಎಲ್ಲ ಭಾಷಿಗರಿಗೂ ನೆನಪಾಗುವುದು ರಸ ಋಷಿ ಕುವೆಂಪು. ಅವರು ರಚಿಸಿರುವ ಕಾವ್ಯಗಳಲ್ಲೂ ಹೆಜ್ಜೆನಿನಂಥ ಸವಿ, ರಸೋತ್ಸಾಹ, ಆಧ್ಯಾತ್ಮದ ಜತೆಗೆ ಮೈಗೂಡಿಸಿಕೊಳ್ಳಬೇಕಾದಂಥ ವೈಚಾರಿಕ ಪ್ರಜ್ಞೆ, ಬೆಟ್ಟದಂಥ ನಿಲುವು. ಇವಿಷ್ಟು ಕುವೆಂಪು ಅವರ ಕಾವ್ಯಗಳಲ್ಲಿ ನಾವು ಪಟ್ಟಿಮಾಡಬಹುದಾದ ಅಸಾಮಾನ್ಯ ಸಂಗತಿಗಳು. ಇಂಥ ಸಾವಿರಾರು ಸತ್ತ್ವಗಳು, ತಣ್ತೀಗಳು ಹುದುಗಿವೆ.
ಹುಟ್ಟುವ ಪ್ರತೀ ಮಗುವು ವಿಶ್ವಮಾನ ವನೇ. ಅನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗು ತ್ತದೆ. ಆದರೆ ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಆತ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು. ಪ್ರತಿ ಮಗುವೂ ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು “ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು “ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ “ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಜಾತಿ, ಮತ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು “ಬುದ್ಧ’ ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ “ಅನಿಕೇತನ’ರಾಗಬೇಕು ಎಂದವರು ಕುವೆಂಪು ಅವರು.
Related Articles
Advertisement
ಕುವೆಂಪು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಜನನ:
29 ಡಿಸೆಂಬರ್ 1904
ನಿಧನ:
11 ನವೆಂಬರ್ 1994
ಪ್ರಶಸ್ತಿಗಳು: ಜ್ಞಾನಪೀಠ ಪುರಸ್ಕಾರ, ಕರ್ನಾಟಕ ರತ್ಮ, ಪದ್ಮ ವಿಭೂಷಣ, ಪದ್ಮ ಭೂಷಣ, ಕನ್ನಡ ಸಾಹಿತ್ಯ ಅಕಾಡೆಮಿ ಪುರಸ್ಕಾರ ಕುವೆಂಪು ಬರೆದ ಆಧುನಿಕ ಕನ್ನಡ ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ಕೇವಲ ರಾಮಾಯಣದ ಕತೆಯನ್ನು ಮಾತ್ರ ಓದಿಸುವುದಿಲ್ಲ. ಅದೊಂದು ಅಂತರಂಗದ ಅನುಭೂತಿ. ಪ್ರಕೃತಿ ಆರಾಧಕರಾದ ಕುವೆಂಪು ಅವರು ಕನ್ನಡದ ಶೇಷ್ಠ ಸಾಕ್ಷಿ ಪ್ರಜ್ಞೆಯೂ ಹೌದು. ಕುವೆಂಪು ಅವರ ವಿಶ್ವ ಮಾನವ ಸಂದೇಶಗಳಾದ ಮನುಜ ಪಥ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣ ದೃಷ್ಟಿಯ ತಣ್ತೀಗಳನ್ನು ಇಡೀ ಜಗತ್ತೇ ಮೈಗೂಡಿಸಿ ಕೊಳ್ಳಬಹುದಾಗಿದೆ. ಅವರ ಪ್ರಕೃತಿ ಪ್ರೇಮಕ್ಕೆ ಕುಪ್ಪಳ್ಳಿಯ ಅವರ ಮನೆಯೇ ಒಂದು ಶ್ರೇಷ್ಠ ಉದಾಹರಣೆ.