Advertisement

UV Fusion: ಪ್ರವಾಸಿಗರ ಮನ ಸೆಳೆಯುತ್ತಿರುವ ಕುವೆಂಪು ಮನೆ

04:12 PM Oct 10, 2023 | Team Udayavani |

ಕವಿ ಕುವೆಂಪು ಅವರ ಮನೆ ಕವಿ ಶೈಲ  ಕೆಳಭಾಗದಲ್ಲಿದೆ. ಕಲ್ಲು ಗೋಪುರ,  ಕವಿಯ ಭಾವಗಳಿಗೆ  ಜೀವ ತುಂಬುವ ಮಂಟಪಗಳಂತೆ  ನೋಡುಗರಿಗೆ ಗಮನ ಸೆಳೆಯುತ್ತದೆ. ನಡುವೆ ಕುವೆಂಪು ಅವರು ಈಗಲೂ  ಹಸುರು ಹುಲ್ಲುಗಳ ಮಧ್ಯೆ, ತರುಲತೆಗಳ ಸಂಗೀತ  ಜಿರುಂಡಗಳು ಆಲಿಸುತ್ತಾ  ಮಲಗಿರುವ ಸಮಾಧಿ ಇದೆ. ಅಲ್ಲೇ ಇರುವ ಹಾಸುಬಂಡೆಗಳ ಬಳಿ ನಿಂತು ನಾನೆಂದೂ ನೋಡದ ನಿಸರ್ಗ  ನೋಟದ ಖುಷಿ ಅನುಭವಿಸಿದೆ.

Advertisement

ಕಣ್ಣು ಹಾಯಿಸಿದಷ್ಟು ದೂರವೂ ಹಸುರು ತುಂಬಿದ ಬೆಟ್ಟಗಳು ಅಲೆಗಳು.  ಇಲ್ಲೇ ಕುಳಿತು ಕುವೆಂಪು ಅವರು ದೂರ ದಿಗಂತದತ್ತ  ದೃಷ್ಟಿ ಹಾಯಿಸುತ್ತಾ. ತಮ್ಮ ಮನದಲ್ಲಿ  ಹಸುರನ್ನು ತುಂಬಿಕೊಳ್ಳುತ್ತಿದ್ದರು. ಅಲ್ಲೇ ಇದ್ದ ಬಂಡೆಯೊಂದರ  ಮೇಲೆ ಕುವೆಂಪು ಅವರ ಗುರು  ಟಿ. ಎಸ್‌. ವೆಂಕಟಣ್ಣಯ್ಯ ಬಿ. ಎಂ. ಶ್ರೀಕಂಠಯ್ಯ. ಕವಿ ಪುತ್ರ  ತೇಜಸ್ವಿ ಅವರ ಹಸ್ತಾಕ್ಷರಗಳನ್ನು ಕಾಣಬಹುದು. ಇಲ್ಲಿಂದ ಪೂರ್ವ ದಿಕ್ಕಿ ನಡೆಯು ನೋಡಿದರೆ ಗುಡ್ಡಗಳು ಸಾಲು ಸಾಲು ದಿಗಂತದ  ತನಕವೂ ಹರಡಿರುವ  ವಿಶಾಲ ನೀಲಾಕಾಶ  ಕಣ್ಮನ ಸೆಳೆಯುವ  ರಮಣೀಯ ದೃಶ್ಯ . ಕವಿ ಕುವೆಂಪು ಕುಳಿತು. ಕಾವ್ಯಕ್ಕೆ ಸ್ಫೂರ್ತಿ ಪಡೆದ ತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿ ಶೈಲ. ಇಲ್ಲಿಂದ ಸೂರ್ಯ ಸ್ಥಾನವನ್ನು  ನೋಡುವುದು ಚಂದವೆಂದು  ಕಳೆದ ಬಾರಿ ನಮ್ಮ ಗೆಳೆಯರ ಜತೆಗೆ ಕುವೆಂಪು ಅವರ ಮನೆಗೆ ಭೇಟಿ  ನೀಡಿದಾಗ. ವಿಶ್ವಾಸ್‌ . ಗಣೇಶ್‌. ಪುನೀತ್‌.ರಾಕೇಶ್‌. ಅಭಿಷೇಕ್‌. ಸುಧೀರ್‌.

ಅಲ್ಲಿಂದಲೇ ದೂರದ  ಕುಂದಾದ್ರಿ.  ಕೊಡಚಾದ್ರಿ ಬೆಟ್ಟಗಳನ್ನು ಕಾಣಬಹುದು ಕವಿ ಶೈಲಯ  ದಿಂದ ಬೆಟ್ಟವಿಳಿವ ದಾರಿಯಲ್ಲು. ನಡೆದು ಬಂದರೆ. ಕವಿಮನೆ ವನದೇವತೆಯ ಮಡಿಲಲ್ಲಿ ಶಾಂತ ವಾತಾವರಣದಿಂದ  ಸದಾ ತಂಪಾಗಿ  ಹುಲ್ಲು ಹಾಸಿಗೆಯ ಮೇಲಿರುವ ದಕ್ಷಿಣ ಭಾರತದ ಶಾಂತಿನಿಕೇತನವಿದು. 2001ರಲ್ಲಿ ಕವಿಮನೆಗೆ ಮೂಲ ಸ್ವರೂಪದಲ್ಲೇ ಮರುಜೀವ ತುಂಬಿ ಇಂದು ಕುವೆಂಪು ಅವರ  ಭಾವನೆಗಳನ್ನು ಹಿಡಿದಿಟ್ಟು  ಮ್ಯೂಸಿಯಂ  ರೀತಿಯಲ್ಲಿ ನವೀಕರಿಸಲಾಗಿದೆ. ಮನೆಯ ಮೂರು ದಿಕ್ಕಿಗೂ  ಅಂತಸ್ತಿನ ಮಹಡಿಯ ಮನೆಯ ಮಧ್ಯದಲ್ಲಿ ನಿರಂತರವಾಗಿ ಒಳಾಂಗಣಕ್ಕೆ  ವರುಣ ಜಾರಿ ಬೀಳುತ್ತಿದೆ . ಅಂಗಳದ ಮನೆಯಲ್ಲಿ  ದೊಡ್ಡ ಕಲಂಬಿಗಳು. ಕವಿ ಮದುವೆಯಾದ ಮಂಟಪ. ದಂಡಿಗೆ. ಕವಿಮನೆಯ ಹಳೆಯ  ಬಾಗಿಲು ಮುಂತಾದ ದೊಡ್ಡ ದೊಡ್ಡ ವಸ್ತುಗಳು  ಇರಿಸಲಾಗಿದೆ.  ಮನೆಯಲ್ಲಿ ಯಾಂತ್ರಿಕರಿಗೆ ಕಾಣಿಸುವ ಹಾಗೆ ಎರಡು  ಮಹಡಿಯುಳ್ಳ  ತೊಟ್ಟಿ ಮನೆ. ಕುಸುರಿ ಕೆಲಸದ ಕಂಬಗಳು  ಕಲಾತ್ಮಕ ಬಾಗಿಲುಗಳು. ಆಗಿನ ಕಾಲದಲ್ಲಿ ಬಳಸುತ್ತಿದ್ದ ಅಡುಗೆ  ತಟ್ಟೆಗಳು ಕಾಣಿಸುತ್ತವೆ.ಹಾಗೆ ನೋಡುತ್ತ ಮುಂದೆ ಸಾಗಿದರೆ  ಬಾಗಿಲಿಂದ ಈಚೆ ದಾಟಿದರೆ  ಕವಿ ಸ್ನಾನ ಮಾಡುತ್ತಿದ್ದಂತಹ  ಮಲೆನಾಡು ಶೈಲಿಯ ಬಚ್ಚಲು  ಕಾಣಬಹುದು. ಇಲ್ಲೇ ಅವರ ಅಜ್ಜಯ್ಯನ  ಅಭ್ಯಂಜನ ಮಾಡುತ್ತಿದ್ದರು. ಅದರ ಕುರಿತು ಕುವೆಂಪು ಅವರ ಬಗ್ಗೆ  ಅಣ್ಣನ ನೆನಪಿನ ಪುಸ್ತಕದಲ್ಲಿ  ತೇಜಸ್ವಿ ಬರೆದಿದ್ದನ್ನು ಕಾಣಬಹುದು. ಬಚ್ಚಲು ಮನೆಯ ಮೇಲ್ಛಾವಣಿಗೆ  ಅಪರೂಪದ ವಿನ್ಯಾಸದ ಪಕ್ಕಾಸುಗಳನ್ನು  ಬಳಸಿರುವುದು  ವಿಶಿಷ್ಟ . ಹಿಂಭಾಗದ ಗೋಡೆಯಲ್ಲಿ ಕಾಲದ ಪರಿಚಯ ಸೂಚಿಸುವ ಶಬ್ಧªವಾದ  ಗಡಿಯಾರವಿದೆ. ಕರಿಕೋಟು  ಕರಿ ಟೋಪಿ. ಕಂಬಳಿ ಮುಂತಾದವನ್ನು  ಗೂಟಕ್ಕೆ ನೇತು ಹಾಕಲಾಗಿದೆ. ತಲೆತಗ್ಗಿಸಿ ಹೆಬ್ಟಾಗಿಲು ದಾಟಿ  ಒಳ ನಡೆದರೆ  ನಡುಮನೆಯ  ಗೋಡೆಗೆದ್ದಕ್ಕೂ  ಉಪಯೋಗಿಸುತ್ತಿದ್ದ ವಸ್ತುಗಳು  ಆಕರ್ಷಕವಾಗಿ  ಕಾಣುತ್ತಿವೆ. ಮತ್ತೂಂದು ಕೋಣೆಯಲ್ಲಿ ಗೋಡೆಗಳ ಮೇಲೆ  ಕವಿಯ ಕುವೆಂಪು ಅವರ ಕುಟುಂಬದವರ ಛಾಯಾಚಿತ್ರಗಳನ್ನು  ಪ್ರದರ್ಶಿಸಲಾಗಿದೆ. ಇಡೀ ಮನೆಯನ್ನು  ಮರದ ಮಾಡುಗಳು ಕಂಡವು. ಅಲ್ಲಲ್ಲಿ ಕವಿವಾಣಿಯ ಸಂದೇಶಗಳು  ಫಲಕಗಳಿದ್ದವು. ಮಧ ನೀಡುವಂತೆ  ಕುವೆಂಪು ಕವಿಗಳ ಸುಮಮಧುರ  ಸಂಗೀತ  ಕೇಳಿ ಬರುತ್ತಿತ್ತು.  ಓ ನನ್ನ ಚೇತನ  ಆಗು ನೀ  ಅನಿಕೇತನ  ಸಾಲುಗಳೇ ಈ ಶತಮಾನೋತ್ಸವದ ಎದುರು ನಿಂತಾಗ ಆಕರ್ಷಿಸುವುದು . ವಿಶಿಷ್ಟ ಶೈಲಿಯಲ್ಲಿ  ನಿರ್ಮಿತವಾಗಿರುವ ಕಟ್ಟಡವೇ  ಶತಮಾನೋತ್ಸವ ಭವನ. ಕವಿಯ  ಸ್ಮಾರಕವಾಗಿ  2004ರಲ್ಲಿ ಈ ಬಹುಪಯೋಗಿಯ  ಕಟ್ಟಡವನ್ನು  ಕಟ್ಟಲಾಗಿದೆ. ಮನೆಯ ಗೋಡೆಗಳ ಮೇಲೆ  ಪೂರ್ಣಚಂದ್ರ ತೇಜಸ್ವಿ ಅವರ  ತಮ್ಮ ಛಾಯಾಚಿತ್ರಗಳಲ್ಲಿ  ತೆಗೆದ ಹಕ್ಕಿ ಚಿತ್ರಗಳನ್ನು  ಕುವೆಂಪು ಕೃತಿಗಳಾದರಿಸಿ  ರಚಿಸಿದ  ಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಕಲಾನಿಕೇತನ:  ಶತಮಾನೋತ್ಸವ ಭವನದಿಂದ   ಕೊಂಚ ದೂರದಲ್ಲಿ ಕಲಾನಿಕೇತನ ಇದೆ. ಇದರ ಮುಂಭಾಗದಲ್ಲಿ. ಈ ಅಂಚಿನ  ಮನೆಯಂಗಳದಲ್ಲಿ  ಕಾಣಸಿಗುವ  ಕುವೆಂಪು ಶಿಲ್ಪಕೃತಿಯ  ನಮ್ಮನ್ನು ಸ್ವಾಗತಿಸುವ ಕುವೆಂಪು ನಾಟಕಗಳಿಂದ  ಆಯ್ದ ದೃಶ್ಯಾವಳಿಗಳನ್ನು  ಗೋಡೆಯ ಮೇಲೆ  ಚಿತ್ರಕರಿಸಿ ಆಕರ್ಷಿಸಲಾಗಿದೆ .  ನಮ್ಮ ರಾಜ್ಯದಲ್ಲಿ ಕವಿಯಾಬ್ಬರ ಜನಿಸಿದ ಮನೆಯನ್ನು  ಉತ್ತಮವಾಗಿ ರಕ್ಷಿಸಿ ಪ್ರವಾಸಿ ತಾಣವಾಗಿ  ರೂಪಿಸಿದ  ಉದಾರಣೆಗೆ  ಕುವೆಂಪು ಅವರ ಕವಿ ಶೈಲವನ್ನು ಕಾಣಬಹುದು. ಪರಿಸರ ಬೀರುವ ಪರಿಣಾಮದ  ಮಹತ್ವ ಅರಿಯಲು  ಒಮ್ಮೆಯಾದರೂ  ಕುಪ್ಪಳ್ಳಿಗೆ  ಭೇಟಿ ನೀಡಬೇಕು.

-ರೇಣುಕಾರಾಜ್‌ ಹರನಹಳ್ಳಿ ಕುವೆಂಪು

Advertisement

ವಿವಿ ಶಂಕರಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next