Advertisement

ಕುತ್ಲೂರು: ಪೊಲೀಸರಿಂದ ನಕ್ಸಲ್‌ ಶಿವಕುಮಾರ್‌ ವಿಚಾರಣೆ

02:26 PM Apr 06, 2017 | Team Udayavani |

ಬೆಳ್ತಂಗಡಿ: ಕುತ್ಲೂರಿನಲ್ಲಿ 4 ವರ್ಷಧಿಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿ ಪೊಲೀಸ್‌ ಕಸ್ಟಡಿಯಲ್ಲಿರುವ ನಕ್ಸಲ್‌ ನಾಯಕ ಶಿವಕುಮಾರ್‌ನನ್ನು ಬುಧವಾರ ಕುತ್ಲೂರಿಗೆ ಕರೆದೊಯ್ಯಲಾಯಿತು.

Advertisement

ನಕ್ಸಲ್‌ ರಾಜ್ಯ ನಾಯಕ ರಮೇಶ್‌ ಯಾನೆ ಸಮೀರ್‌ ಯಾನೆ ರಫಿ ಯಾನೆ ಮಾಧವ ಯಾನೆ ಶಿವಕುಮಾರ್‌ ಬಿ.ಎಸ್‌. (52)ನನ್ನು ಕುತ್ಲೂರು ರಾಮಚಂದ್ರ ಭಟ್ಟರ ಮನೆಗೆ ಕರೆದೊಯ್ಯಲಾಯಿತು. 2013ರಲ್ಲಿ ನಾರಾವಿ ಸಮೀಪದ ಕುತ್ಲೂರಿನಲ್ಲಿ ಬೈಕ್‌ ಹಾಗೂ ಆಮ್ನಿಗೆ ಬೆಂಕಿ ಹಚ್ಚಿದ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಲಾಗುತ್ತಿದೆ. ಪೊಲೀಸ್‌ ವಾಹನದಿಂದ ಕೆಳಗಿಳಿಯಲು ಒಲ್ಲದ ಶಿವಕುಮಾರನನ್ನು ಪೊಲೀಸರು ತನಿಖೆಗಾಗಿ ಇಳಿಯುವಂತೆ ಸೂಚಿಸಿದರು. ಅನಂತರ ವಿಚಾರಣೆ ವೇಳೆ ಕೂಡ ತಾನು ಈ ಕೃತ್ಯದಲ್ಲಿ ನೇರ ಭಾಗಿಯಲ್ಲ, ತಮ್ಮ ಸಂಘಟನೆಯ ಬೇರೆ ಸದಸ್ಯರ ಕೃತ್ಯ ಆಗಿರಬಹುದು ಎಂದು ಹೇಳಿಕೆ ಕೊಟ್ಟ.

ಬೆಂಗಳೂರು ಕೋರಮಂಗಲ ಕ್ರೀಡಾಗ್ರಾಮದ ಕೃಷ್ಣ ನಗರ ಸ್ಲಂ ಏರಿಯಾ ನಿವಾಸಿ, ಸಿಪಿಐ ಮಾವೋವಾದಿಯ ರಾಜ್ಯ ಸಮಿತಿ ಸದಸ್ಯ ಶಿವಕುಮಾರ್‌ ನಕ್ಸಲ್‌ಪಾತಕ ಕಾರ್ಯಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು ಹೆಬ್ರಿಯ ಸೀತಾನದಿಯ ಭೋಜಶೆಟ್ಟಿ ಕೊಲೆ ಪ್ರಕರಣ, ಪೊಲೀಸ್‌ ಮಾಹಿತಿದಾರ ಕೇಶವ ಯಡಿಯಾಲ್‌ ಕೊಲೆ ಪ್ರಕರಣ, ಸದಾಶಿವ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿಯಲ್ಲಿ ನಡೆದ ನಾಲ್ಕು ರಾಜ್ಯಧಿಗಳ ನಕ್ಸಲರು ಭಾಗವಹಿಸಿದ್ದ ಸಭೆಯಲ್ಲಿ ಶಿವಧಿಕುಮಾರ್‌ ಭಾಗಿಯಾಗಿದ್ದ. ಈ ಸಂದರ್ಭ ನಕ್ಸಲ್‌ ಕಾರ್ಯಚಟುವಟಿಕೆಯನ್ನು ಮಲೆನಾಡಿನಿಂದ ಕೇರಳಕ್ಕೆ ಸ್ಥಳಾಂತರಿಸಲು ನಿರ್ಣಯವಾಗಿತ್ತು. ಆಗಲೇ ಪೊಲೀಸ್‌ ದಾಳಿಯಾಗಿತ್ತು. ಅನಂತರ ಫಾರೆಸ್ಟ್‌ ತನಿಖಾ ಠಾಣೆ ಸೇರಿದಂತೆ ಅನೇಕ ದಾಳಿಗಳಲ್ಲಿ ಶಿವಕುಮಾರ್‌ ಭಾಗಿಯಾಗಿದ್ದ.

2016ರ ಸೆ. 11ರಂದು ಬೆಂಗಳೂರಿನಲ್ಲಿ ಆಂಧ್ರ ಪೊಲೀಸರಿಂದ ಬಂಧಿತನಾಗಿ ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲ್ಪಟ್ಟಿದ್ದ.

Advertisement

Udayavani is now on Telegram. Click here to join our channel and stay updated with the latest news.

Next