Advertisement

25 ಸಾವಿರ ಮತಗಳ ಅಂತರದಿಂದ ಕುಸುಮಾವತಿ ಗೆಲ್ಲಿಸಿ: ಎಚ್ಕೆ

11:26 AM May 04, 2019 | pallavi |

ಕುಂದಗೋಳ: ಮೈತ್ರಿ ಸರ್ಕಾರದ ನಾಯಕರೆಲ್ಲ ಒಗ್ಗೂಡುವುದರೊಂದಿಗೆ 25 ಸಾವಿರ ಮತಗಳ ಅಂತರದಲ್ಲಿ ಕುಸುಮಾವತಿ ಅವರನ್ನು ಗೆಲ್ಲಿಸಲು ಶ್ರಮಿಸೋಣ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Advertisement

ಸಂಶಿಯ ಎಸ್‌ಜಿಎಫ್‌ಎಸ್‌ ಶಾಲಾವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಶಿವಳ್ಳಿ ಅವರ ಅಪಾರ ನಂಬಿಕೆ, ಅಭಿಮಾನ, ಪ್ರೀತಿಯನ್ನು ಎಲ್ಲರೂ ಮರಳಿ ಪಡೆಯಬೇಕಾದರೆ ಅವರ ಪತ್ನಿ ಕುಸುಮಾವತಿ ಅವರಿಗೆ ಮತ ನೀಡಿ ಗೆಲ್ಲಿಸಬೇಕಾಗಿದೆ. ಸಿದ್ದರಾಮಯ್ಯನವರ ಅನೇಕ ಭಾಗ್ಯಗಳನ್ನು ತಮ್ಮೆಲ್ಲರ ಮನೆಬಾಗಿಲಿಗೆ ತಲುಪಿಸಿದ ಶಿವಳ್ಳಿ ಅವರ ಕಾರ್ಯಕ್ಕೆ ಎಲ್ಲರೂ ಋಣಿಯಾಗಬೇಕಾಗಿದೆ ಎಂದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಕಳೆದ ಅವಧಿ ಕಾಂಗ್ರೆಸ್‌ ಸರ್ಕಾರದಲ್ಲಿ 160 ಭರವಸೆಗಳನ್ನು ನಾವು ಈಡೇರಿಸಿದ್ದೆವು. ಮೋದಿ ಅವರು ನೂರರಷ್ಟು ಸುಳ್ಳು ಭರವಸೆ ನೀಡಿ ಒಂದೂ ಈಡೇರಿಸಿಲ್ಲ ಎಂದು ಹರಿಹಾಯ್ದರಲ್ಲದೆ ಶಿವಳ್ಳಿ ಅವರ ಬೆಂಬಲಕ್ಕೆ ಪ್ರತಿಯೊಬ್ಬ ಕಾರ್ಯಕರ್ತ ನಿಂತು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ವಿನಯ ಕುಲಕರ್ಣಿ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು 10 ಮನೆ ಆಯ್ಕೆ ಮಾಡಿಕೊಂಡು ಕಾಂಗ್ರೆಸ್‌ ಪರವಾಗಿ ಮತ ಹಾಕಿಸಲು ಅಣಿಯಾಗಬೇಕು ಎಂದರು.

ಮಾಜಿ ಶಾಸಕ ಎಂ.ಎಸ್‌. ಅಕ್ಕಿ, ಎಂ.ಡಿ. ಲಕ್ಷ್ಮೀನಾರಾಯಣ, ಅಭ್ಯರ್ಥಿ ಕುಸುಮಾವತಿ ಶಿವಳ್ಳಿ, ವೀರಣ್ಣ ಮತ್ತಿಕಟ್ಟಿ, ಆರ್‌.ಬಿ. ತಿಮ್ಮಾಪುರ, ವಿನಯಕುಮಾರ ಪಾಟೀಲ, ಪ್ರಸಾದ ಅಬ್ಬಯ್ಯ, ಅರವಿಂದ ಕಟಗಿ ಮಾತನಾಡಿದರು. ಉಮೇಶ ಹೆಬಸೂರ, ಸುರೇಶಗೌಡ ಪಾಟೀಲ, ಷಣ್ಮುಖ ಶಿವಳ್ಳಿ, ದಯಾನಂದ ಕುಂದೂರ, ಬೀರಪ್ಪ ಕುರುಬರ, ಸಕ್ರು ಲಮಾಣಿ ಇನ್ನಿತರರಿದ್ದರು.

Advertisement

ಚಿಂಚೋಳಿ ಕ್ಷೇತ್ರದ ಉಮೇಶ ಜಾಧವ ಅವರು ತಮ್ಮನ್ನು ತಾವು ಬಿಜೆಪಿಗೆ ಮಾರಿಕೊಂಡರು. ಆದರೆ, ಶಿವಳ್ಳಿ ಅವರು ಮಾರಿಕೊಳ್ಳದೆ ಪಕ್ಷದ ನಿಷ್ಠತೆಗೆ ಬದ್ಧರಾದರು. ಅಂಥವರ ಪತ್ನಿ ಕುಸುಮಾವತಿ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ನಾವೂ ಸಹ ನಿಮ್ಮೊಂದಿಗಿರುತ್ತೇವೆ.

•ದಿನೇಶ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಮೋದಿ ಅವರು ಸುಳ್ಳು ಹೇಳುವ ನೋಬೆಲ್ ಪ್ರಶಸ್ತಿಗೆ ಅರ್ಹರಾದ ಪ್ರಧಾನಿ. ಸಬ್‌ ಕಾ ಸಾಥ್‌ ಸಬ್‌ ಕಾ ಸತ್ಯನಾಶ ಮಾಡಿದ ವಿಶೇಷ ಪ್ರಧಾನಿ. ಸೈನಿಕರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದು, ಸುಳ್ಳಿನ ಕಥೆಗಾರನ ಮಾತು ನಮಗೆಲ್ಲ ಗೊತ್ತಿದೆ. ಅಂತಹ ಸುಳ್ಳಿನ ಸರದಾರನ ಪಕ್ಷವಾದ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಿ ಸತ್ಯಕ್ಕೆ ಜಯ ಸಿಗುವಂತಾಗಲಿ.

•ಎ.ಎಂ. ಹಿಂಡಸಗೇರಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next