Advertisement

ಆರ್.ಆರ್ ನಗರ ಉಪಚುನಾವಣೆ: ಜ್ಯೋತಿಷಿ ಸಲಹೆಯಂತೆ ನಾಮಪತ್ರ ಸಲ್ಲಿಸಿದ ಕುಸುಮಾ

03:22 PM Oct 13, 2020 | keerthan |

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ ಇಂದು ನಾಮಪತ್ರ ಸಲ್ಲಿಸಿದರು.

Advertisement

ಪೂರ್ವ ನಿಗದಿಯಂತೆ ನಾಳೆ ಕೈ ನಾಯಕರ ಸಮ್ಮುಖದಲ್ಲಿ ಕುಸುಮಾ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪ್ತ ಜ್ಯೋತಿಷಿ ಡಾ.ಬಿ.ಪಿ ಆರಾದ್ಯ ಅವರ ಸಲಹೆಯಂತೆ ಕುಸುಮಾ ಇಂದು ನಾಮಪತ್ರ ಸಲ್ಲಿಸಿದರು.

ಕುಸುಮಾ ಅವರ ಹುಟ್ಟಿದ ದಿನ ಮಂಗಳವಾರವಾಗಿದ್ದು, ಹೀಗಾಗಿ ತಾರಾಬಲದ ಮೇಲೆ ಮಂಗಳವಾರವಾದ ಇಂದು ಒಂದು ನಾಮಪತ್ರ ಸಲ್ಲಿಸಲು ಜ್ಯೋತಿಷಿ ಡಾ.ಬಿ.ಪಿ ಆರಾದ್ಯ ಸೂಚಿಸಿದ್ದರು.

ಇಂದು 12 ಗಂಟೆಯಿಂದ12. 15 ನಿಮಿಷದ ಒಳಗೆ ನಾಮಪತ್ರ ಸಲ್ಲಿಸಲು ಸಲಹೆ ನೀಡಿದ್ದರು. ಹೀಗಾಗಿ ಆರಾದ್ಯ ಅವರ ಸಮ್ಮುಖದಲ್ಲೇ ಕುಸುಮಾ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ:ಮುನಿರತ್ನಗೆ ಬಿಗ್ ರಿಲೀಫ್: ತುಳಸಿ ಮುನಿರಾಜು ಅರ್ಜಿ ವಜಾ ಮಾಡಿದ ಸುಪ್ರೀಂ!

Advertisement

ನಾಳೆ (ಬುಧವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸಮ್ಮುಖದಲ್ಲಿ ಕುಸುಮಾ ಎರಡನೇ ನಾಮಪತ್ರ ಸಲ್ಲಿಸಲಿದ್ದಾರೆ.

ಆರ್ ಆರ್ ನಗರ ಕ್ಷೇತ್ರಕ್ಕೆ ಕುಸುಮಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವ ವೇಳೆಯಲ್ಲೂ ಡಿ.ಕೆ ಶಿವಕುಮಾರ್ ಜ್ಯೋತಿಷಿ ಸಲಹೆ ಪಡೆದಿದ್ದರು. ಮುನಿರತ್ನ ವಿರುದ್ಧ ಕುಸುಮಾ ಕಣಕ್ಕಿಳಿಸಿದರೆ ಮುನಿರತ್ನ ಅವರನ್ನ ಸೋಲಿಸಬಹುದು ಎಂದು ಡಾ. ಆರಾದ್ಯ ಅವರು ಡಿ.ಕೆ.ಶಿವಕುಮಾರ್ ಗೆ ಸಲಹೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next