ಶ್ರೀರಂಗಪಟ್ಟಣ: ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಆಯೋಜಿಸುವ ಕುಸ್ತಿ ಪಂದ್ಯಾವಳಿಗೆ ಕುಸ್ತಿ ನಡೆಸಲು ಶನಿವಾರ ಜೋಡಿ ಕಟ್ಟುವ ಕಾರ್ಯವನ್ನು ಕುಸ್ತಿ ಸಮಿತಿ ಸದಸ್ಯರು ನಡೆಸಿದರು. ಶ್ರೀರಂಗಪಟ್ಟಣ ಕುಸ್ತಿ ಸಮಿತಿ ಅಧ್ಯಕ್ಷ ಜೂನಿಯರ್ ಶ್ರೀಕಂಠು ನೇತೃತ್ವದಲ್ಲಿ ಪಟ್ಟಣದ ಕೋದಂಡರಾಮ ದೇವಾಲಯದ ಆವರಣದಲ್ಲಿ ವಿವಿಧ ಪೈಲ್ವಾನರು ಆಗಮಿಸಿದ್ದು ಅವರ ಜೋಡಿಗೆ ತಕ್ಕ ಪೈಲ್ವಾನರನ್ನು ಹುಡುಕಿ ಕುಸ್ತಿ ಜತೆಗಳನ್ನು ಕಟ್ಟುವ ಕಾರ್ಯ ನಡೆಯಿತು.
ಇದನ್ನೂ ಓದಿ:- ಅಭಿವೃದ್ಧಿ ಮಾಡಲು ಮಂತ್ರಿ ಆಗಬೇಕಿಲ್ಲ
ಇದರಲ್ಲಿ ಹೆಸರಾಂತ ಪೈಲ್ವಾನರಾದ ಭದ್ರಾವತಿ ಕಿರಣ ಹಾಗೂ ಮೈಸೂರಿನ ಯಶ್ವಂತ್ ಅವರ ಮಾರ್ಪಿಟ್ ಕುಸ್ತಿಯನ್ನು ಶ್ರೀರಂಗಪಟ್ಟಣದ ದಸರಾದಲ್ಲಿ ನಡೆಸಲಾಗಿದೆ. ಗಂಜಾಂ ಪೈ. ತೇಜಸ್ ಹಾಗೂ ಶಬೀರ್ ಖಾನ್ ಜೋಡಿಯೊಂದಿಗೆ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ 40 ಜೋಡಿ ಕಾಟಾ ಕುಸ್ತಿ ನಡೆಸಲಾಗಿದೆ.
ಸಂದಲ್ ಕೋಟೆ ಆವರಣದಲ್ಲಿ ಪ್ರತಿ ದಸರಾದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿರುವ ದಸರಾ ಸಮಿತಿ ಉಸ್ತುವಾರಿ ಜಿಲ್ಲಾಧಿಕಾರಿಗಳು ಈಗಾಗಲೇ ಸಂದಲ್ ಕೋಟೆ ಆವರಣವನ್ನು ಪರಿಶೀಲನೆ ನಡೆಸಿದ್ದಾರೆ. ಅ.9ರಿಂದ ದಸರಾ ಆರಂಭವಾಗಲಿದ್ದು ಅ.10ರಂದು ಮಧ್ಯಾಹ್ನ 3ಗಂಟೆಗೆ ದಸರಾ ಕುಸ್ತಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷರು ತಿಳಿಸಿದರು.
ಹಿರಿಯ ಪೈಲ್ವಾನ್‌ರಾದ ಪೈ.ಮುಕುಂದ, ಶ್ರೀಕಂಠು, ಲಕ್ಷ್ಮಣ್ ಸಿಂಗ್, ಶಂಕರ್‌ಜಾನಿ, ಹೊಸಹಳ್ಳಿ ಶಿವು, ಪ್ರಕಾಶ್, ಸುಬ್ಬಣ್ಣ, ಬಾಲುಗಂಜಾಂ, ರವಿಪ್ರಸಾದ್, ಮೇಳಾಪುರ ಜಯರಾಂ, ಜೋಡಿಕಟ್ಟುವ ಕಾರ್ಯದಲ್ಲಿ ಇದ್ದರು.