ಕುಷ್ಟಗಿ: ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಕಾರಾತ್ಮಕ ಕ್ರಮಕ್ಕೆ ಹಿನ್ನೆಡೆಯಾಗಿದ್ದು, ರೈತರ ತೊಗರಿ ಉತ್ಪನ್ನ ಖರೀದಿಗೆ ಸರ್ಕಾರ ಎಳ್ಳು ನೀರು ಬಿಟ್ಟಂತಾಗಿದೆ.
ಮಾರುಕಟ್ಟೆ ಫೆಡರೇಷನ್ ವ್ಯವಸ್ಥಾಪಕ ನಿದೇಶಕ ಜಯರಾಮ್, ಸಹಕಾರ ಕಾರ್ಯದರ್ಶಿ ನಾಗಲಾಂಬಿಕಾದೇವಿ ಮೊದಲಾದ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಯಲ್ಲಿ ತೊಗರಿ ಖರೀದಿ ವಿಷಯವಾಗಿ ಚರ್ಚಿಸಲಾಗಿದೆ. ಸಭೆಯಲ್ಲಿ ತೊಗರಿ ಉತ್ಪನ್ನ ಎಫ್‌ಸಿಐ ಖರೀದಿ ಸುವುದಾರೆ ಎಫ್‌ಎಕ್ಯೂ ಗುಣಮಟ್ಟ ಪರಿಗಣಿಸಲೇಬೇಕಿದೆ. ಇಲ್ಲವಾದರೆ ಕೇಂದ್ರ ಸರ್ಕಾರ ಖರೀದಿಸಿದ ಉತ್ಪನ್ನ ತಿರಸ್ಕರಿಸುವ ಸಾಧ್ಯತೆಗಳಿವೆ. ಸರ್ಕಾರದಿಂದ ನೇರ ಖರೀ ದಿಸುವುದಾದರೆ, ರೈತರ ಇತರೇ ಉತ್ಪನ್ನಗಳನ್ನು ಖರೀಸಬೇಕಿದೆ. ಕುಷ್ಟಗಿ ತಾಲೂಕಿನಲ್ಲಿ ರೈತರು ಬೆಳೆದ ತೊಗರಿ ಉತ್ಪನ್ನ ಎಫ್‌ಎಕ್ಯೂ ಗುಣಮಟ್ಟದಲ್ಲಿಲ್ಲ. ಹೀಗಾಗಿ ಖರೀದಿಸಲಾಗದು ಎಂದು ಸಭೆ ಸ್ಪಷ್ಟಪಡಿಸಿದೆ ಎಂದು ಬೆಂಗಳೂರಿನಲ್ಲಿರುವ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಮಾಹಿತಿ ನೀಡಿದರು.
ಸಿಎಂ ಭೇಟಿ: ಈ ನಡುವೆ ಗುರುವಾರ ಬೆಳಗ್ಗೆ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕುಷ್ಟಗಿ ತಾಲೂಕಿನ ತೊಗರಿ ಖರೀದಿ ವಿಚಾರವಾಗಿ, ಸಿ.ಎಂ. ಎಚ್.ಡಿ. ಕುಮಾರಸ್ವಾಮಿ, ಸಮನ್ವಯ ಸಮಿತಿ ಸಚಿವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರನ್ನು ಖುದ್ದು ಭೇಟಿ ಮಾಡಿ ರೈತರ ತೊಗರಿ ಉತ್ಪನ್ನ ಖರೀದಿಸುವಂತೆ ಮನವಿ ಸಲ್ಲಿಸಲಾಗಿದೆ.
ತೀರಾ ನೋವಾಗಿದೆ: ತಾಲೂಕಿನಲ್ಲಿ ಅಲ್ಪ ಸ್ವಲ್ಪ ಬಂದ ಮಳೆಯಲ್ಲೇ ತೊಗರಿ ಬೆಳೆಯಲಾಗಿದೆ, ತೊಗರಿ ಉತ್ಪನ್ನ ಕಾಳು ಬಲಿಯದೇ ಇರುವುದು, ಗಿಡದಲ್ಲಿ ತೂತು ಬಿದ್ದಿರುವುದು ಹವಾಮಾನ ವೈಫರಿತ್ಯದಿಂದಾಗಿದೆ. ಆದರೆ ಅಧಿಕಾರಿಗಳು ಪ್ರಸ್ತಾಪಿಸುವುದರ ಮಟ್ಟಿಗೆ ಗುಣಮಟ್ಟ ಕೆಟ್ಟಿಲ್ಲ. ತಾಲೂಕಿನಲ್ಲಿ ತೊಗರಿ ಉತ್ಪನ್ನ 50ಲಕ್ಷದಲ್ಲಿದ್ದರೆ ಶಾಸಕರ ವಿವೇಚನಾ ನಿಧಿಯಲ್ಲಿ ಖರೀದಿ ಸುತ್ತಿದೆ. ಆದರೆ ರೈತರ ತೊಗರಿ ಉತ್ಪನ್ನ 25ರಿಂದ 30 ಕೋಟಿ ರೂ. ಆಗುತ್ತಿದ್ದು, ಸರ್ಕಾರವೇ ಖರೀದಿಸದೇ ಇದ್ದರೆ ರೈತರಿಗೆ ಉಳಿಗಾಲವಿಲ್ಲ. ಅಧಿಕಾರಿಗಳ ಈ ನಡೆ ತೀರಾ ನೋವಾಗಿದ್ದು, ತೊಗರಿ ಉತ್ಪನ್ನ ಖರೀದಿ ವಿಚಾರದಲ್ಲಿ ಅಧಿಕಾರಿಗಳು ರೈತರ ಹಿತಾಸಕ್ತಿಯನ್ನು ಕಡೆಗಣಿಸಿರುವುದು ನೋವಾಗಿದೆ.
ಸರ್ಕಾರದ್ದು ಅವೈಜ್ಞಾನಿಕ ನಿರ್ಧಾರ: ಈ ಸಭೆಯಲ್ಲಿ ಕೊನೆಯ ಪ್ರಯತ್ನವಾಗಿದ್ದು ಅದೂ ವಿಫಲವಾಗಿದೆ. ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದೆ. ಸರ್ಕಾರದ ನಿರ್ಣಯಕ್ಕೆ ಬದ್ಧರಾಗಿರಬೇಕಿರುವುದು ಅನಿವಾರ್ಯವಾಗಿದೆ. ರಾಜ್ಯ ಸರ್ಕಾರದಿಂದ ಅನ್ಯಾಯವಾಗಿದೆ. ತೊಗರಿ ಬೆಳೆಗಾರರಿಗೆ ಇನ್ನೇನು ಹೇಳಲು ಸಾಧ್ಯವಿಲ್ಲ ತಾವು ತೊಗರಿ ಖರೀದಿ ವಿಚಾರವಾಗಿ ಶಕ್ತಿ ಮೀರಿ ಪ್ರಯತ್ನಿಸಿರುವೆ. ತಮ್ಮ 25 ವರ್ಷದವರೆಗೆ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದು ಇದರಂತಹ ಪ್ರಯತ್ನ ಯಾವುದಕ್ಕೂ ಮಾಡಿಲ್ಲ. ಹಿರಿಯ ಅಧಿಕಾರಿಗಳು ಪರಿಚಯವಿದೆಯಾದರೂ, ಕೆಳ ಹಂತದ ಒಬ್ಬ ಅಧಿ ಕಾರಿ ತಪ್ಪು ನಿರ್ಧಾರದಿಂದ ತೊಗರಿ ಖರೀದಿಸಲು ಸಾಧ್ಯವಾಗಿಲ್ಲ ಎಂದು ಶಾಸಕ ಬಯ್ನಾಪೂರ ಕಳವಳ ವ್ಯಕ್ತಪಡಿಸುತ್ತಾರೆ.