ಕುಷ್ಟಗಿ: ಲಿಂಗಸುಗೂರು ತಾಲೂಕಿನ ಸೈನಿಕನ ತಾಯಿಯ ಹತ್ಯೆ ಖಂಡಿಸಿ ಕುಷ್ಟಗಿ ತಾಲೂಕಾ ಭಗಿರಥ ಉಪ್ಪಾರ ಕ್ಷೇಮಾಭಿವೃದ್ಧಿ ಸಂಘದಿಂದ ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಕುಷ್ಟಗಿ ತಾಲೂಕಾ ಅಧ್ಯಕ್ಷ ಸಂಗಪ್ಪ ಭಾವಿಕಟ್ಟಿ ಅವರು, ನಿಲೋಗಲ ಗ್ರಾಮದಲ್ಲಿ ಹೊಲದಲ್ಲಿ ಚರಂಡಿ ನೀರು ಹರಿಸುವ ವಿಚಾರದಲ್ಲಿ ನಡೆದ ಕ್ಷುಲ್ಲಕ ಜಗಳದಲ್ಲಿ ಸೈನಿಕನ ತಾಯಿ 75 ವರ್ಷದ ಈರಮ್ಮ ಅವರು ಬಲಿಯಾಗಿದ್ದಾರೆ. ಈ ಘಟನೆಯಲ್ಲಿ ಸೈನಿಕ ಅಮರೇಶ ಮೇಲೆಯೂ ಹಲ್ಲೆಯಾಗಿದೆ.
ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ಶರಣಪ್ಪ ಗೌಡ ಸೇರಿದಂತೆ 17 ಜನರು ಭಾಗಿಯಾಗಿದ್ದಾರೆ. ಆದರೆ ಪ್ರಭಾವಿ ಮುಖಂಡ ಶರಣಪ್ಪಗೌಡ ಹೊರತು ಪಡಿಸಿ 6 ಜನರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಸದರಿ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಹಿಂದುಳಿದ ದುರ್ಬಲ ಉಪ್ಪಾರ ಸಮಾಜದವರ ಮೇಲಾಗುವ ದೌರ್ಜನ್ಯ ನಿಯಂತ್ರಿಸಬೇಕೆಂದು ತಹಶೀಲ್ದಾರ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಮಂಜುನಾಥ ಕರಿಭೀಮಪ್ಪನವರ್, ಮಂಜುನಾಥ ಗುಳಗಳಿ ಮತ್ತಿತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೆಂಗಳೂರು: ಪತ್ನಿ ಮತ್ತು ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದು ಪೊಲೀಸರಿಗೆ ಶರಣಾದ!