ಕುಷ್ಟಗಿ: ಬಾಲ್ಯ ವಿವಾಹಿತೆ ಅಪ್ರಾಪ್ತೆಯನ್ನು ಪುಸಲಾಯಿಸಿ ಬಲತ್ಕಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಿಯಕರ ಯುವಕನಿಗೆ ಪೋಕ್ಸೋ ಕಾಯಿದೆ ಅಡಿ ಬಂಧಿಸಿದ ಘಟನೆ ತಾಲೂಕಿನ ಜೂಲಕುಂಟಿ ಗ್ರಾಮದಲ್ಲಿ ನಡೆದಿದೆ. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸಿದ ಅರೋಪದ ಮೇರೆಗೆ ಆಪ್ರಾಪ್ತೆಯ ಪತಿ, ತಂದೆ, ತಾಯಿ, ಅತ್ತೆಯ ವಿರುದ್ದ ಪ್ರಕರಣ ದಾಖಲಾಗಿದೆ.
ಜೂಲಕುಂಟಿ ಗ್ರಾಮದ 7 ವರ್ಷದ ಬಾಲಕಿಯನ್ನು ಬಾಲಕಿಯ ತಾಯಿಯ ಸಹೋದರ ಮಗ ತೆಗ್ಗಿಹಾಳ ಗ್ರಾಮದ ಯಮನಪ್ಪ ದೊಡ್ಡಪ್ಪ ಕುರಿ ಎಂಬಾತನೊಂದಿಗೆ ಬಾಲ್ಯ ವಿವಾಹವಾಗಿತ್ತು. ಮದುವೆ ಮಾಡಿಕೊಂಡಿದ್ದ ಯಮನಪ್ಪ ಕುರಿ ಮೂಕನಾಗಿದ್ದ. ಈತನೊಂದಿಗೆ ಅಪ್ರಾಪ್ತೆ ಮದುವೆ ಒಲ್ಲದ ಮದುವೆಯಾಗಿತ್ತು.
ನಂತರ 14 ವರ್ಷ 9 ತಿಂಗಳಾಗಿದ್ದ ಸಂಧರ್ಭದಲ್ಲಿ ಅಪ್ರಾಪ್ತೆಯೊಂದಿಗೆ ಅದೇ ಗ್ರಾಮದ ಪ್ರಿಯಕರ ಮಹಮ್ಮದ್ ರಫೀಕ್ ಶ್ಯಾಮೀದಸಾಬ್ ಪಿಂಜಾರ ಸಲುಗೆ ಬೆಳಸಿಕೊಂಡಿದ್ದ. ಕಳೆದ ಏಪ್ರಿಲ್ 8ರಂದು ತೆಗ್ಗಿಹಾಳ ಗ್ರಾಮದಿಂದ ಬೈಕ್ ಮೇಲೆ ಹೊಸಪೇಟೆ ಗೆ ಕರೆದೊಯ್ದು ಅಲ್ಲಿಂದ ಬಸ್ಸಿನಲ್ಲಿ ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿಗೆ ಕರೆದೊಯ್ದಿದ್ದ. ಅಲ್ಲಿ ಬಾಡಿಗೆ ಮನೆ ಮಾಡಿ ಏಪ್ರೀಲ್ 9 ರಿಂದ ಏಪ್ರಿಲ್ 15 ರವರೆಗೂ ದಿನವೂ ಆಕೆಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ.
ಇತ್ತ ಪುತ್ರಿ ನಾಪತ್ತೆಯಾಗಿರುವ ಕುರಿತು ಮನೆಯವರ ದೂರಿನ ಮೇರೆಗೆ ಈ ಜೋಡಿಯನ್ನು ಪತ್ತೆ ಹಚ್ಚಿರುವ ತಾವರಗೇರಾ ಪೊಲೀಸರು, ತಾವರಗೇರಾ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಪ್ರಾಪ್ತೆಗೆ ಬಾಲ್ಯ ವಿವಾಹವಾಗಿರುವ ವಿಚಾರ ಬೆಳಕಿಗೆ ಬಂದಿದೆ, ಈ ಹಿನ್ನೆಲೆಯಲ್ಲಿ ತಂದೆ ಅಮರೇಶ ಕನಸಾವಿ, ತಾಯಿ ಲಕ್ಷ್ಮವ್ವ ಅತ್ತೆ ಪಕೀರಮ್ಮ ಕುರಿ ಹಾಗೂ ಬಾಲ್ಯದ ಪತಿ ಯಮನಪ್ಪ ಕುರಿ ವಿರುದ್ದ ಹಾಗೂ ಅಪ್ರಾಪ್ತೆಗೆ ಪುಸಲಾಯಿಸಿ ಬಲತ್ಕರಿಸಿದ ಆರೋಪಿ ಮಹಮ್ಮದ್ ರಫೀಕ್ ಶ್ಯಾಮೀದ ಸಾಬ್ ಪಿಂಜಾರ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ.
ತಂದೆ, ತಾಯಿ, ಅತ್ತೆ ಹಾಗೂ ಬಾಲ್ಯ ವಿವಾಹವಾಗಿರುವ ಪತಿ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಅಪ್ರಾಪ್ತೆಯನ್ನು ಯಾಮಾರಿಸಿ ಬಲತ್ಕರಿಸಿದ ಪ್ರಿಯಕರನಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.