ಕುಷ್ಟಗಿ: ಬಿಳಿಜೋಳಕ್ಕೆ ಹಕ್ಕಿ ಕಾಟಕ್ಕೆ ಬೇಸತ್ತ ರೈತರು ಜಾತ್ರೆ ಪೀಪಿ ಊದಿದ ಸೌಂಡ್ ನಿಂದ ಹಕ್ಕಿಗಳನ್ನು ನಿಯಂತ್ರಿಸುತ್ತಿದ್ದಾರೆ.
ಸದ್ಯ ಹಿಂಗಾರು ಹಂಗಾಮಿನ ಬಿಳಿಜೋಳ ಸಮೃದ್ದವಾಗಿ ಬೆಳೆದು ನಿಂತಿದೆ. ಬಿಳಿಜೋಳ ತೆನೆಗೆ ಹಕ್ಕಿಗಳು ಹಿಂಡು ಹಿಂಡಾಗಿ ಮುಗಿ ಬೀಳುತ್ತಿದ್ದು, ತೆನೆಯಲ್ಲಿ ಕಾಳು ಜಳ ಜಳ ಆಗುತ್ತಿದ್ದು, ಹಕ್ಕಿಗಳ ದಾಳಿಗೆ ಇಳುವರಿ ಕುಸಿತದ ಆತಂಕ ವ್ಯಕ್ತವಾಗಿದೆ. ದಿನ ಬೆಳಗಾದರೆ ಹಕ್ಕಿಗಳನ್ನು ಕೂಗಿ, ತಮಟೆ ಬಡಿದು ಸುಸ್ತಾದ ರೈತರು, ಇದೀಗ ಜಾತ್ರೆಯಲ್ಲಿ ಮಕ್ಕಳಿಗೆ ಖರೀದಿಸಿದ ಪೀಪಿ ರೈತರು ಬಳಸುತ್ತಿದ್ದು ಈ ಪ್ರಯೋಗ ಯಶಸ್ವಿಯಾಗಿದೆ. ಈ ಭಾಗದಲ್ಲಿ ಜಾತ್ರಾ ಮಹೋತ್ಸವಗಳು ಜರಗುತ್ತಿದ್ದು ಪೀಪಿಗಳು ಸುಲಭವಾಗಿ ಸಿಗುತ್ತಿದ್ದು ರೈತರು ಮುದ್ದಾಂ ಬಿಳಿಜೋಳದ ಬೆಳೆಗೆ ಹಕ್ಕಿಗಳ ಪಡಿಸಲು ಪೀಪಿ ಬಳಕೆ ವೈರಲ್ ಆಗುತ್ತಿದೆ.
ಈ ಕುರಿತು ಕನಕೊಪ್ಪದ ರೈತ ನಿಂಗಪ್ಪ ಜೀಗೇರಿ ಮಾತನಾಡಿ, ಅಸಮರ್ಪಕ ಮಳೆ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನ ಬಿಳಿಜೋಳ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಸಹಜವಾಗಿ ಬಿಳಿಜೋಳ ಇಳುವರಿ ಸಹ ಕಡಿಮೆ ಆಗುವುದರಿಂದ ಬೆಲೆ ದುಪ್ಪಟ್ಟಾಗುವ ಸಾದ್ಯತೆಗಳಿವೆ. ಹೀಗಾಗಿ ಬೆಳೆದ ಬೆಳೆ ಕೈಗೆಟಕಲು ಪೀಪಿ ಊದಿ ಹಕ್ಕಿ ನಿಯಂತ್ರಿಸುವುದು ರೈತರಿಗೆ ಹೆಚ್ಚುವರಿ ಕೆಲಸವಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ‘ಬೇಜವಾಬ್ದಾರಿ ಮತ್ತು ತರ್ಕಹೀನ ಎಂದ ಸಿಎಂ