ಕುಷ್ಟಗಿ: ಕುಷ್ಟಗಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಕೊಂಡಗುರಿ ಅವರು, ಇದ್ದಕ್ಕಿದ್ದಂತೆ ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದಾರೆ.
ಮೂಲತಃ ಯಲಬುರ್ಗಾ ತಾಲೂಕಿನ ಹಿರೇಅರಳ ಗ್ರಾಮದ ನಿವಾಸಿ, ಕುಷ್ಟಗಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾಗಿ ಸೇವೆಯಲ್ಲಿದ್ದರು. ರಾಘವೇಂದ್ರ ಕೊಂಡಗುರಿ ಅವರು, ಕಳೆದ ಡಿ.1ರಂದು ಬೆಳಗ್ಗೆ 10 ಗಂಟೆಗೆ ಕಛೇರಿ ಕೆಲಸಕ್ಕೆಂದು ಮನೆಯಿಂದ ನಿರ್ಗಮಿಸಿದ್ದಾರೆ ಎಂದು ಅವರ ಪತ್ನಿ ವಿದ್ಯಾಶ್ರೀ ಕೊಂಡಗುರಿ ಅವರು, ಡಿ.6 ರಂದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ 37 ವರ್ಷದ ತಮ್ಮ ಪತಿ ರಾಘವೇಂದ್ರ ಕೊಂಡಗುರಿ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಾರೆ.
ಸದರಿ ದೂರಿನಲ್ಲಿ ಡಿ.1ರಂದು ಅವರ ಪರಿಚಯಸ್ಥ ಹನುಮೇಶ ಕೊಂಡಗುರಿ ಅವರ ಬೈಕಿನಲ್ಲಿ ಬಸ್ ನಿಲ್ದಾಣದವರೆಗೂ ಬಂದಿದ್ದಾರೆ. ಅಲ್ಲಿಂದ ಕಛೇರಿಗೂ ಹೋಗದೇ ನಾಪತ್ತೆಯಾಗಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಕಪ್ಪು ಟೀ ಶರ್ಟ, ಬ್ರೌನ್ ಕಲರ್ ಜರ್ಕಿನ್ ಧರಿಸಿದ್ದಾರೆ. 6.0 ಫೀಟ್ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, ಸಾಧರಣ ಮೈಕಟ್ಟು ಇದ್ದು ಕನ್ನಡ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆಂದು ದೂರಿನಲ್ಲಿ ವಿವರಿಸಲಾಗಿದೆ.
ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಅವರು ಕಾಣೆಯಾಗಿರುವುದು ನಿಖರವಾದ ಕಾರಣ ತಿಳಿದು ಬಂದಿಲ್ಲ. ಅವರ ಎರಡು ಮೋಬೈಲ್ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.
ಇದನ್ನೂ ಓದಿ: ಕಾಡಾನೆಗೆ ಕಬ್ಬು ನೀಡಲು ಹೋಗಿ 75 ಸಾವಿರ ರೂ. ದಂಡ ಕಟ್ಟಿದ ಲಾರಿ ಚಾಲಕ