ಗಂಗಾವತಿ : ಕ್ಷುಲ್ಲಕ ಕಾರಣಕ್ಕಾಗಿ ತಾಲ್ಲೂಕಿನ ಕಿಷ್ಕಿಂಧಾ ಹನುಮನಹಳ್ಳಿಯಲ್ಲಿ ಕೋಮು ಸಂಘರ್ಷ ನಡೆದು 3 ಜನ ಯುವಕರಿಗೆ ತೀವ್ರ ಗಾಯವಾದ ಘಟನೆ ನಡೆದಿದೆ.
ಹನುಮನಹಳ್ಳಿಯ 2 ಕೋಮುಗಳ ಮಧ್ಯೆ ಶನಿವಾರ ಬೆಳಿಗ್ಗೆ ಸಂಘರ್ಷ ನಡೆದಿದ್ದು ಇದರಲ್ಲಿ ಮುತ್ತಪ್ಪನಾಯಕ (23), ಸುರೇಶ್ ನಾಯಕ (21) ಹಾಗೂ ಲಿಂಗರಾಜು ನಾಯಕ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ .
ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸರು ಖಾಸಿಮ್ ‘ಹುಸೇನಬಾಷಾ ಹಾಗೂ ಮರ್ದಾನ್ ಸಾಬ್ ಇವರನ್ನು ವಶಕ್ಕೆ ಪಡೆದಿದ್ದಾರೆ .
ಕಠಿಣ ಕ್ರಮ : ಸಂಘಪರಿವಾರದ ಯುವಕರನ್ನು ಕ್ಷುಲ್ಲಕ ಕಾರಣಕ್ಕಾಗಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಈ ಬಗ್ಗೆ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ಪರಣ್ಣ ಮುನವಳ್ಳಿ ಸುದ್ದಿಗಾರರಿಗೆ ತಿಳಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಚ್.ಎಂ.ಸಿದ್ದರಾಮಸ್ವಾಮಿ ತಿಪ್ಪೇರುದ್ರಸ್ವಾಮಿ, ಕೆಲೋಜಿ ಸಂತೋಷ್ ಹಾಗೂ ಸಂಘ ಪರಿವಾರದ ಇತರ ಮುಖಂಡರು ಇದ್ದರು .
ಇದನ್ನೂ ಓದಿ : ಕೋವಿಡ್ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನಿಮ್ಮ ಪಕ್ಷದವರಿಗೆ ಗೊತ್ತು: ಎಚ್ ಡಿಕೆ ಕಿಡಿ