ಕುಷ್ಟಗಿ : ಸ್ವಲ್ಪ ಮಳೆಯಾದರೂ ಸಾಕು ಕುಷ್ಟಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಮೇಲೆ ನಿಲ್ಲುತ್ತಿರುವ ನೀರಿನಿಂದ ಅಪಘಾತಗಳು ಸಂಭವಿಸುತ್ತಿವೆ .
ಸುಗಮ ಸಂಚಾರಕ್ಕಾಗಿ ಹೆದ್ದಾರಿ ಅಪಘಾತ ನಿಯಂತ್ರಿಸಲು ಕುಷ್ಟಗಿ ಹೆದ್ದಾರಿಗೆ 66 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದ್ದು ಅಪಘಾತ ನಿಯಂತ್ರಣದಲ್ಲಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧೀಕಾರ (ಎನ್.ಎಚ್.ಎ.ಐ) ನಿರ್ಲಕ್ಷೆಯಿಂದಾಗಿ ಹೆದ್ದಾರಿ ಮೇಲ್ಸೇತುವೆ ಮೇಲೆ ವಿನಾಕಾರಣ ಅಪಘಾತ ಸಂಭವಿಸುತ್ತಿವೆ.
ಹೆದ್ದಾರಿ ಮೇಲ್ಸೇತುವೆ ( ಸಹದೇವಪ್ಪ ಕಟ್ಟಿಗೆ ಅಡ್ಡೆ ಪಕ್ಕದಲ್ಲಿ) ಮಳೆ ನೀರು ಹರಿಯದೇ ಒಂದೆಡೆ ತಗ್ಗು ಪ್ರದೇಶದಲ್ಲಿ ನಿಲ್ಲುತ್ತಿದ್ದು, ಇದರಿಂದ ಚಾಲಕರು ಸಹಜ ಹೆದ್ದಾರಿ ಎಂದು ಗ್ರಹಿಸಿ ಚಾಲನೆಯಿಂದ ವಾಹನಗಳು ಮುಗುಚಿ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತಿವೆ. ಇದೇ ರೀತಿ ಎಂಟು ಅಪಘಾತಗಳು ಸಂಭವಿಸಿವೆ. ಈ ಅವಸ್ಥೆಯ ಬಗ್ಗೆ ಸ್ಥಳೀಯರು ಹೆದ್ದಾರಿ ಪ್ರಾಧೀಕಾರದ ಗಮನಕ್ಕೆ ತಂದರೂ ಪ್ರಯೋಜನೆ ಆಗಿಲ್ಲ. ಮೇಲ್ಸೇತುವೆ ಮೇಲೆ ನೀರು ನಿಲ್ಲದಂತೆ ಕ್ರಮವಹಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ.
ಈ ಕುರಿತು ಸಿಪಿಐ ಈ ವಿಷಯ ಗಮನಕ್ಕೆ ಬಂದಿರಲಿಲ್ಲ ಈ ಕೂಡಲೇ ಹೆದ್ದಾರಿ ಗುತ್ತಿಗೆವಹಿಸಿಕೊಂಡಿರುವ ಓಎಸ್ ಇ ಕಂಪನಿ ಯೋಜನಾ ವ್ಯವಸ್ಥಾಪಕ ರಾಮಪ್ಪ ಕುಬಕಡ್ಡಿ ಸಂಪರ್ಕಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.
ಇದನ್ನೂ ಓದಿ : ಸನಾತನ ಮೌಲ್ಯಗಳನ್ನು ಮಕ್ಕಳ ತಲೆಯಲ್ಲಿ ತುರುಕುವುದು ಅಪಾಯಕಾರಿ: ಕುಂ.ವೀರಭದ್ರಪ್ಪ