Advertisement
ಕಂದಾಯದ ಮೂಲಗಳಿಂದ ಸ್ವೀಕೃತಿ ಮೊತ್ತ 5,66,66,300 ರೂ. ನಿರೀಕ್ಷಿತ ಪಾವತಿ ಮೊತ್ತ5,61,61,396 ರೂ., 2021-22ನೇ ಸಾಲಿನನಿರೀಕ್ಷಿತ ಬಂಡವಾಳ 2,06,00,000 ರೂ. ಆಗಿದ್ದು,ಬಂಡವಾಳದ ಪಾವತಿ ಅಷ್ಟೇ ಮೊತ್ತ ಆಗಿದೆ. ಅಸಾಧಾರಣ ಸ್ವೀಕೃತಿಯಲ್ಲಿ 84,19,719 ರೂ.ಆಗಿದ್ದರೆ, ಅಷ್ಟೇ ಮೊತ್ತ ಪಾವತಿ ನಿರೀಕ್ಷಿಸಲಾಗಿದೆ.ಆಸ್ತಿ ತೆರಿಗೆ 1,15,98,900, ನೀರಿನ ತೆರಿಗೆಬೇಡಿಕೆ 33,70,400 ರೂ. ಜಾಹೀರಾತು ಬೇಡಿಕೆ81,000 ರೂ. ಉದ್ದಿಮೆ ತೆರಿಗೆ ಬೇಡಿಕೆ 3,91,000 ರೂ., ದಿನದ ಸಂತೆ ಬೇಡಿಕೆ 5,20,000 ರೂ.,ವಾರದ ಸಂತೆ ಬೇಡಿಕೆ 5,60,000 ರೂ. ದನದ ಸಂತೆಸಂತೆ ಬೇಡಿಕೆ 1,10,000 ರೂ. ಕಟ್ಟಡ ಪರವಾನಗಿಶುಲ್ಕ 10ಲಕ್ಷ ರೂ. ಖಾತಾ ವರ್ಗಾವಣೆ ಶುಲ್ಕಬೇಡಿಕೆ 5ಲಕ್ಷ, ವಿನ್ಯಾಸ ಅಭಿವೃ ದ್ಧಿ ಶುಲ್ಕ ಬೇಡಿಕೆ25 ಲಕ್ಷ ರೂ., ಎಸ್ ಡಬ್ಲ್ಯೂ ಎಂ ಶುಲ್ಕ ಬೇಡಿಕೆ 5 ಲಕ್ಷ ರೂ. ವಸೂಲಿಗೆ ನಿಗದಿಗೊಳಿಸಲಾಗಿದೆ.15ನೇ ಹಣಕಾಸು ಯೋಜನೆಯಲ್ಲಿ 1,38,00,000 ರೂ., ಎಸ್ ಎಫ್ ಸಿ ಮುಕ್ತ ನಿಧಿಯಲ್ಲಿ53,00,000 ರೂ. ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ 15ಲಕ್ಷ ರೂ. ನಿಗದಿಗೊಳಿಸಲಾಗಿದೆ.
Related Articles
Advertisement
ಪ್ರಸಕ್ತ ಸಾಲಿನ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು ಮಂಡಿಸುವ ಈ ಬಜೆಟ್‌ಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಸಾಮೂಹಿಕ ಗೈರಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಸದರಿ ಸಭೆಯಲ್ಲಿ ಬಿಜೆಪಿ 8 ಸದಸ್ಯರು, ಇಬ್ಬರು ಬಿಜೆಪಿ ಬೆಂಬಲಿತ ಕಾಂಗ್ರೆಸ್ ಸದಸ್ಯರು ಹಾಗೂ ಪಕ್ಷೇತರ ಸದಸ್ಯರಲ್ಲಿ ಬಿಜೆಪಿಸದಸ್ಯೆ ಕಾರಣಾಂತರಗಳಿಂದ ಗೈರಾಗಿದ್ದರಿಂದ ಒಟ್ಟು ಸದಸ್ಯ ಬಲ 12 ಆಗಿತ್ತು. ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ 7 ಸದಸ್ಯರುಒಟ್ಟು 9 ಜನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು ಮೊಬೈಲ್ ಮೂಲಕ ತಮ್ಮ ಬಿಜೆಪಿ ಸದಸ್ಯರಾದ ಕಲ್ಲೇಶ ತಾಳದ, ರಾಜೇಶ ಪತ್ತಾರ, ವೀರೇಶಗೌಡ ಬೆದವಟ್ಟಿಗೆ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಕರೆಯಿಸಿಕೊಳ್ಳುವ ಹೈಡ್ರಾಮ್ ನಡೆಯಿತು. ಆಗ ಸದಸ್ಯರ ಸಂಖ್ಯೆ 12ಕ್ಕೆ ಹೆಚ್ಚಿಸಿಕೊಂಡ ಬಳಕವೇಪುರಸಭೆ ಅಧ್ಯಕ್ಷ ಗಂಗಾಧಸ್ವಾಮಿ ಹಿರೇಮಠ ಆಯವ್ಯಯ ಮಂಡಿಸಬೇಕಾಯಿತು. ಕಾಂಗ್ರೆಸ್ ಸದಸ್ಯರ ಸಾಮೂಹಿಕ ಗೈರು ಹಾಜರಿಗಿಂತ ತಮ್ಮ ಪಕ್ಷದ ಮೂರು ಸದಸ್ಯರು ಸಭೆಗೆ ವಿಳಂಬವಾಗಿ ಬಂದಿರುವುದು ಬಿಜೆಪಿ ಸ್ವಪಕ್ಷೀಯ ಸದಸ್ಯರಲ್ಲಿ ಭಿನ್ನಾಭಿಪ್ರಾಯದ ಸುಳಿವು ನೀಡಿದೆ.