ಕುಷ್ಟಗಿ: ಕುಷ್ಟಗಿ ಪಟ್ಟಣದ 5ನೇ ವಾರ್ಡಿನಲ್ಲಿ ಮನೆ ಭಾಗಶಃ ಕುಸಿದು ಕುಟುಂಬ ಸಂತ್ರಸ್ತರಾಗಿದ್ದು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಅ.10 ರಂದು ಮನೆಯ ಅಡುಗೆ ಕೋಣೆಯ ಭಾಗ ಕುಸಿದಿದ್ದು ಮನೆಯಲ್ಲಿದ್ದ ವೃದ್ದೆ, ಮಗ, ಸೊಸೆ, ಇಬ್ಬರು ಮೊಮ್ಮಕ್ಕಳು ಸೇರಿದಂತೆ ಐವರು ಅಪಾಯದಿಂದ ಪಾರಾಗಿದ್ದಾರೆ. ಸಂತ್ರಸ್ತ ಕುಟುಂಬ ಬೇರೆ ಬಾಡಿಗೆ ಮನೆಯಲ್ಲಿ ಇರುವಷ್ಟು ಹಣ ಇಲ್ಲದಿರುವುದು ಇದೇ ಪರಿಸ್ಥಿತಿಯ ಮನೆಯಲ್ಲಿ ವಾಸ ಮುಂದುವರಿಸಿದ್ದಾರೆ.
ಮತ್ತೆ ಮಳೆಯಾದರೆ ಅಪಾಯವಿದ್ದರು ಸದರಿ ಮನೆಯ ಇನ್ನೊಂದು ಕೋಣೆಯಲ್ಲಿ ಅಡುಗೆ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಮನೆಗಳು ಮುಸುರೆ ತಿಕ್ಕುವ ಕೆಲಸದಲ್ಲಿದ್ದ ವಯೋವೃದ್ದೆ ನೀಲಮ್ಮ ಬಾವಿಕಟ್ಟಿ ಅವರಿಗೆ ಇಳಿವಯಸ್ಸಿನಲ್ಲಿ ಪಾರ್ಶ್ವವಾಯು ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ವಯೋವೃದ್ದೆಯ ಇನ್ನೀಬ್ಬರು ಮಕ್ಕಳು ಬೆಂಗಳೂರಿಗೆ ಗುಳೇ ಹೋಗಿದ್ದಾರೆ. ಇಲ್ಲಿ ವಾಸವಿರುವ ಈ ಕುಟುಂಬ ಅಕ್ಷರಶತ ಅತಂತ್ರವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಮುಂದಾಗಬೇಕು ಎಂದು ಹೈ-ಕ ಯುವ ಶಕ್ತಿ ಸಂಘಟನೆಯ ಅಧ್ಯಕ್ಷ ಬಸವರಾಜ ಗಾಣಗೇರ ತಿಳಿಸಿದ್ದಾರೆ.
ವಾರ್ಡಿನ ಸದಸ್ಯ ಚಿರಂಜೀವಿ ಹಿರೇಮಠ ಪ್ರತಿಕ್ರಿಯಿಸಿ ಅ.10 ರಂದು ಸದರಿಯವರ ಹಳೆಯ ಮನೆ ಕುಸಿದಿದ್ದು ಪುರಸಭೆ ಸಿಬ್ಬಂದಿ ಗಮನಕ್ಕೆ ಮಾಹಿತಿ ನೀಡಲಾಗಿದೆ ಎಂದರು.
ಇದನ್ನೂ ಓದಿ : ಮಳೆಯಿಂದ ಹಾನಿಯಾದವರಿಗೆ ಪರಿಹಾರ ವಿತರಣೆಯಲ್ಲಿ ಲೋಪ ಸಲ್ಲದು: ಸಿಎಂ ಬೊಮ್ಮಾಯಿ ಸೂಚನೆ