Advertisement
ಉದ್ದುಮ ಹಾರಕ, ಕೋರಲೆ, ಬರಗು, ನವಣೆ ಇತ್ಯಾದಿ ಸಿರಿಧಾನ್ಯ ಪ್ರಸ್ತುತ ಪ್ರಮುಖ ಆಹಾರ ಬೆಳೆ ಅತಿ ಕಡಿಮೆ ಮಳೆ ಇರುವ ಪ್ರದೇಶಗಳಲ್ಲೂ ಉತ್ತಮ ಬೆಳೆ ನಿರೀಕ್ಷಿಸಿಸಬಹುದಾಗಿದೆ. ಶುಷ್ಕ, ಒಣ ಪರಿಸ್ಥಿತಿಗಳಲ್ಲಿ ಕಡಿಮೆ ಫಲವತ್ತತೆಯಲ್ಲೂ ಈ ಬೆಳೆ ಬೆಳೆಬಹುದಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯಕ್ಕೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಇವನ್ನು ಬೆಳೆಯುವಲ್ಲಿ ರೈತರಲ್ಲಿ ನಿರಾಸಕ್ತಿ ಕಂಡು ಬಂದಿದೆ. ಇದೇ ಸಂಧರ್ಭದಲ್ಲಿ ರೈತ ಸಿರಿ ಯೋಜನೆ ಜಾರಿಯಲ್ಲಿದ್ದು, ಹಂಚಿನಾಳ ರೈತ ಈಶಪ್ಪ ಮೆಳ್ಳಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಬೆಳೆದ ನವಣೆ ಮಳೆ ಅಭಾವದಲ್ಲೂ ಸಮೃದ್ಧ ಇಳುವರಿ ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಕೊಳವೆಬಾವಿ ನೀರನ್ನು ತುಂತುರು ನೀರಾವರಿ ಮೂಲಕ ಬಳಸಿಕೊಳ್ಳಲಷ್ಟೇ ಸಾಕಾಗುತ್ತದೆ. ರೈತ ಈಶಪ್ಪ ಅವರು, ಮಳೆಯಾಶ್ರಿತ ಬೆಳೆ ಬೆಳೆಯುವುದು ಅನಿವಾರ್ಯ ಪರಿಸ್ಥಿತಿಯಲ್ಲೂ, ಒಂದೂವರೆ ಎಕರೆ ಹತ್ತಿ ಬೆಳೆದಿದ್ದು, ಇನ್ನೂ ಒಂದೂವರೆ ಎಕರೆಯಲ್ಲಿ
ರೈತ ಸಿರಿ ಯೋಜನೆಯಲ್ಲಿ ನವಣೆ ಎಸ್.ಎಂ.ಟಿ 100-1 ಈ ತಳಿ ಬೆಳೆದಿದ್ದಾರೆ. ಸದ್ಯ ಹತ್ತಿ ಕಾಯಿ ಕಟ್ಟುವ ಹಂತದಲ್ಲಿದೆ. ನವಣೆ ಮಾತ್ರ ಮಳೆ ಅಭಾವದಲ್ಲೂ ಸಮೃದ್ಧ ಇಳುವರಿ ಬಂದಿದ್ದು, ಮಳೆ ತೀರ ಅಭಾವ ಪರಿಸ್ಥಿತಿಯಲ್ಲಿ ಬೆಳೆ ಒಣಗುವುದನ್ನು ನೋಡಲಾಗದೇ ತುಂತುರು ನೀರಾವರಿ ಮೂಲಕ ನೀರುಣಿಸಿದ್ದರಿಂದ ನವಣೆ ಬಂಪರ್ ಇಳುವರಿ ಬಂದಿದೆ.