Advertisement
ಮದುವೆಯಾಗಿ ಸತಿ ಪತಿಗಳಾಗಿ ಹಸೆಮಣೆ ಏರಿ ನವ ದಂಪತಿಯಾಗುವ ಮೊದಲೇ ಈ ದುರ್ಘಟಣೆ ನಡೆದಿದೆ. ಅಮರೇಶ ಮಾಲಿಪಾಟೀಲ(21), ಯಲ್ಲಮ್ಮ ಗೋನಾಳ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮಂಗಳವಾರ ಅಪರಾಹ್ನ 11ಕ್ಕೆ ಯಲ್ಲಮ್ಮ ಗೋನಾಳ ಕುಟುಂಬಕ್ಕೆ ಸೇರಿದ ಜನತಾ ಮನೆಯಲ್ಲಿ ನೇಣಿಗೆ ಕೊರಳೊಡ್ಡುವ ಮೂಲಕ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
Related Articles
ಈ ನವ ಜೋಡಿ ಅನ್ಯೋನ್ಯವಾಗಿದ್ದರಿಂದ ಕಳೆದ ವರ್ಷದ ಹಿಂದೆ ಎರಡು ಕುಟುಂಬಗಳ ಪರಸ್ಪರ ಸಮ್ಮತಿ ಮೇರೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಅಮರೇಶ ಮಾಲಿಪಾಟೀಲ, ತಾವರಗೇರಾ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಯಲ್ಲಮ್ಮ ಗೋನಾಳ ಪಿಯುಸಿ ವ್ಯಾಸಾಂಗದಲ್ಲದ್ದಳು ಎಂದು ಗೊತ್ತಾಗಿದೆ. ಒಂದೇ ಗ್ರಾಮ, ಒಂದೇ ಜಾತಿ, ಮಾವ, ಸೊಸೆ ಸಂಬಂಧಿಯಾಗಿದ್ದರಿಂದ ಪಾಲಕರ ವಿರೋಧ ಇರಲಿಲ್ಲ. ಈ ಜೋಡಿ ಮೇ 23 ರ ಅಂಕಲಿಮಠದ ಜಾತ್ರೆಗೂ ಹೋಗಿ ಬಂದಿದ್ದರು. ಆದಾಗ್ಯೂ ಈ ನವ ಜೋಡಿಗಳು ಆತ್ಮಹತ್ಯೆ ಮಾಡಿಕೊಂಡಿರುವ ನಡೆ ನಿಗೂಢ ರಹಸ್ಯವಾಗಿದೆ.
Advertisement
ಯಲ್ಲಮ್ಮ ಗೋನಾಳ ಗೆ 17 ವರ್ಷ 9 ತಿಂಗಳಾಗಿದ್ದು, ಕಾನೂನು ಪ್ರಕಾರ ಮದುವೆಯಾಗುವ ಅರ್ಹತೆ 18 ವರ್ಷಕ್ಕೆ ಮೂರು ತಿಂಗಳು ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಪಾಲಕರು ಮದುವೆ ಮುಂದೂಡುವ ತೀರ್ಮಾನ ಈ ಜೋಡಿಗಳ ಬೇಸರಿಸಿಕೊಂಡಿದ್ದರು ಎನ್ನುವ ಮಾತುಗಳು ವ್ಯಕ್ತವಾಗಿದೆ.
ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರತಿಕ್ರಿಯಿಸಿ, ಒಂದೇ ಸಮುದಾಯ, ಅದೇ ಗ್ರಾಮ ಹಾಗೂ ಪಾಲಕರ ವಿರೋಧ ಇಲ್ಲದಿದ್ದರೂ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜೋಡಿ ಪ್ರತ್ಯೇಕವಾದ ಮನೆಯಲ್ಲಿ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುವ ಪೂರ್ವದಲ್ಲಿ ಜಗಳ ಮಾಡಿಕೊಂಡಿರಹುದು ಈ ಹಿನ್ನೆಲೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರುಗಳ ಮೋಬೈಲ್ ಪರಿಶೀಲಿಸಿದ ಬಳಿಕವೇ ನಿಖರ ಕಾರಣ ಗೊತ್ತಾಗಲಿದೆ ಎಂದರು.