Advertisement

Kushtagi: ಬಸ್ ನಿಲ್ದಾಣ ಬಳಿ ಬಾಕ್ಸ್ ನಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ

06:14 PM Jan 06, 2024 | Team Udayavani |

ಕುಷ್ಟಗಿ: ಬಸ್ ನಿಲ್ದಾಣದ ಹಿಂಬದಿಯ ಕಂಪೌಂಡ್ ಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಗುರುವಾರ ಸಂಜೆ ನವಜಾತ ಶಿಶುವಿನ ಮೃತ ದೇಹ ಸರಕಾರಿ ಆಸ್ಪತ್ರೆಯ ಇಂಜಕ್ಷನ್ ವೈಲ್ ಬಾಕ್ಸ್ ನಲ್ಲಿ ಕಂಡು ಬಂದಿದೆ.

Advertisement

ಬಸ್ ನಿಲ್ದಾಣದ ಕಂಪೌಂಡ್ ಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಅವಧಿ ಪೂರ್ಣವಾಗದೇ ಜನಿಸಿದ ನವಜಾತ ಶಿಶುವಿನ ಮೃತ ದೇಹವನ್ನು ಇಂಜಕ್ಷನ್ ವೈಲ್ ಬಾಕ್ಸನಲ್ಲಿ ನಾಯಿಯೊಂದು ಎಳೆದಾಡಿದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುವವರಿಗೆ ಕಂಡು ಬಂದಿದೆ. ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.

ಹಿರಿಯ ಆರೋಗ್ಯ ಮೇಲ್ವಿಚಾರಕಿ ಸುಶೀಲಾ ಆಗಮಿಸಿ, ಪರಿಶೀಲಿಸಿದ್ದಾರೆ. ಮೃತ ಶಿಶು ಹೆಣ್ಣು ಆಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಕರೆದೊಯ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಸಾಕಷ್ಟು ಜನ ನೆರೆದಿದ್ದು, ತಾಯಿ ಗರ್ಭದಿಂದ ಹೊರಬರುವ ಮೊದಲೇ ಈ ಸ್ಥಿತಿ ಕಂಡು ಮರುಗಿದರು. ಪುರಸಭೆ ನೈರ್ಮಲ್ಯ ಅಧಿಕಾರಿ ಪ್ರಾಣೇಶ ಬಳ್ಳಾರಿ, ಎಎಸೈ ತಾಯಪ್ಪ ಇದ್ದರು.

ಅನುಮಾನ ಹುಟ್ಟಿಸಿದ ಬಾಕ್ಸ್?
ನವಜಾತ ಶಿಶುವಿನ ಮೃತ ದೇಹ ಸರಕಾರಿ ಆಸ್ಪತ್ರೆಯ ಇಂಜಕ್ಷನ್ ವೈಲ್ ಬಾಕ್ಸ್ ನಲ್ಲಿ ಬಟ್ಟೆಯಲ್ಲಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ಮೃತ ದೇಹದ ಹೊಕ್ಕುಳ ಬಳ್ಳಿಗೆ ಸ್ಟಿಚ್ ಹಾಕಿದ್ದು, ಈ ಮಗು ಸರಕಾರಿ ಆಸ್ಪತ್ರೆ ಇಲ್ಲವೇ ಖಾಸಗಿ ಆಸ್ಪತ್ರೆಯಲ್ಲಿ ಅವಧಿ ಪೂರ್ಣವಾಗದೇ ಜನಿಸಿರುವ ಶಿಶುವಾಗಿದ್ದು, ಅಕ್ರಮ ಸಂಬಂಧ ಇಲ್ಲವೇ ಹೆಣ್ಣು ಶಿಶು ಎಂಬುದು ಗೊತ್ತಾಗಿ ಈ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಇಂಜಕ್ಷನ್ ವೈಲ್ ಬಾಕ್ಸ್ ನ ಮೇಲೆ ಬಿಟಿ ಸೆಟ್ ಎಂದು ಹಸಿರು ಶಾಯಿಯ ಕೈ ಬರಹ ಇದ್ದು, ಭಾರತ ಸರಕಾರ ಸರಬರಾಜು ಮಾತ್ರ, ಮಾರಟಕ್ಕೆ ಅಲ್ಲ ಎಂದು ಬರೆದಿರುವ ಬಾಕ್ಸನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ.

ಮೃತ ನವಜಾತ ಶಿಶುವಿನ ಮೃತ ದೇಹದ ಸ್ಥಳದಲ್ಲಿ ಇಂಜಕ್ಷನ್ ವೈಲ್ ಬಾಕ್ಸ್ ನಲ್ಲಿ ಕಂಡು ಬಂದಿದೆ. ಆ ಬಾಕ್ಸ್ ಬ್ಯಾಚ್ ನಂಬರ, ಯಾರಿಗೆ ಸರಬರಾಜಾಗಿದೆ ಎಂಬುದು ಗೊತ್ತಾಗಲಿದ್ದು ಸದರಿ ಬಾಕ್ಸ್ ಪೊಲೀಸರ ವಶದಲ್ಲಿದೆ ಎಂದು ಕುಷ್ಟಗಿ ಆರೋಗ್ಯ ಅಧಿಕಾರಿ ಡಾ. ಆನಂದ ಗೋಟೂರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next