Advertisement

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

09:40 PM Sep 30, 2023 | Team Udayavani |

ಕುಷ್ಟಗಿ: ತಾಲೂಕಿನ ಜಾಲಿಹಾಳ ಗ್ರಾಮದ ಹೊರವಲಯದಲ್ಲಿ ಯುವಕ ಭಾಗಪ್ಪ ಅಲಿಯಾಸ್ ಭಾಗ್ಯರಾಜ್ ಕ್ಯಾದಿಗುಪ್ಪಿ ಅನುಮಾನಸ್ಪದವಾಗಿ ಕೊಲೆಯಾಗಿದ್ದ ಪ್ರಕರಣವನ್ನು ಕುಷ್ಟಗಿ ಪೊಲೀಸರು ಕೇವಲ ನಾಲ್ಕೇ ದಿನಗಳಲ್ಲಿ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕಳೆದ ಸೆ.25ರಂದು ಜಾಲಿಹಾಳ – ಶಿರಗುಂಪಿ ರಸ್ತೆಯ ಬಸನಗೌಡರ ಹೊಲದ ಬಳಿ, ಜಾಲಿಹಾಳ ಗ್ರಾಮದ ಕಟ್ಟಡ ಕಾರ್ಮಿಕ ಭಾಗಪ್ಪ ಹನಮಪ್ಪ ಕ್ಯಾದಿಗುಪ್ಪಿಯನ್ನು ಅಮಾನುಷವಾಗಿ ಹರಿತ ಆಯುಧದಿಂದ ಕೊಲೆ ಮಾಡಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಯಾವೂದೇ ಸುಳಿವು ಬಿಟ್ಟು ಕೊಡದೇ ಕೊಲೆ ಮಾಡಿದ್ದರು. ಈ ಪ್ರಕರಣದ ಕ್ಷಿಪ್ರ ತನಿಖೆಯಿಂದ ಕುಷ್ಟಗಿ ಪೊಲೀಸರು ಬೇಧಿಸಿದ್ದಾರೆ.

ಸಂತೋಷ ಸಿದ್ದಪ್ಪ ಗೋತಗಿ ಹಾಗೂ ದುರಗಪ್ಪ ಹನಮಂತ ಪೂಜಾರಿ ಎಂಬವರು ಬಂಧಿತ ಆರೋಪಿಗಳು. ಸ್ನೇಹಿತರಿಬ್ಬರು ಪ್ರತ್ಯೇಕ ವೈಯಕ್ತಿಕ ಸಿಟ್ಟಿಗೆ ಸ್ನೇಹಿತ ಭಾಗಪ್ಪ ನನ್ನು ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ. ಕೊಲೆಯಾದ ಭಾಗಪ್ಪ ಹಾಗೂ ಈ ಆರೋಪಿಗಳು ಒಂದೇ ಸಮುದಾಯದವರು. ಸದ್ಯ ನ್ಯಾಯಾಂಗ ವಶದಲ್ಲಿದ್ದಾರೆ.

ಕೊಲೆಯಾದ ಭಾಗಪ್ಪ 9 ವರ್ಷಗಳ ಹಿಂದೆ ಹುಬ್ಬಳ್ಳಿಯ ಸಹೋದರ ಸಂಬಂಧಿ ಯಶೋಧಳನ್ನು ಮದುವೆಯಾಗಿದ್ದ. ಇದಕ್ಕೆ ಮನೆಯವರ ವಿರೋಧ ಇತ್ತು. ಆದಾಗ್ಯೂ ಪ್ರೇಮಿಸಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಆಗಿದ್ದ. ನಂತರ ಪತಿ ಭಾಗಪ್ಪ ಹಾಗೂ ಪತ್ನಿ ಯಶೋಧ ಜಗಳದಿಂದಾಗಿ ಹುಬ್ಬಳ್ಳಿ ಬಿಟ್ಟು ಜಾಲಿಹಾಳ ಗ್ರಾಮದಲ್ಲಿ ಗೌಂಡಿ ಕೆಲಸದಲ್ಲಿ ನಿರತನಾಗಿದ್ದ. ಭಾಗ್ಯರಾಜ್ ಅದೇ ಗ್ರಾಮದ ಸ್ನೇಹಿತ ಸಂತೋಷ ನ ತಾಯಿ ಹಾಗೂ ಅಕ್ಕನನ್ನು ತನ್ನ ಪಕ್ಕದಲ್ಲಿ ಮಲಗಲು ಕಳಿಸು ಎಂದಿದ್ದ. ಇನ್ನೋರ್ವ ಸ್ನೇಹಿತ ದುರಗಪ್ಪನ ಪ್ರೇಯಸಿಗೆ ಮೊಬೈಲ್ ಪ್ರೀತಿಯ ಸಂದೇಶ ಕಳುಹಿಸಿದ್ದ ಹಿನ್ನೆಲೆಯಲ್ಲಿ ಈ ಇಬ್ಬರು ಸ್ನೇಹಿತರು ಭಾಗಪ್ಪನ ವಿರುದ್ದ ದ್ವೇಷ ಬೆಳೆಸಿಕೊಂಡಿದ್ದರು.

ಈ ಹಿನ್ನೆಲೆ ಯಲ್ಲಿ ವೈಯಕ್ತಿಕ ದ್ವೇಷ ಕೊಲೆ ಮಾಡುವ ಮಟ್ಟಿಗೆ ಬೆಳೆದಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಅರೋಪಿಗಳನ್ನು ಪತ್ತೆ ಹಚ್ಚಿದ್ದ ತನಿಖಾಧಿಕಾರಿ ಸಿಪಿಐ ಯಶವಂತ ಬಿಸರಳ್ಳಿ, ಪಿಎಸೈ ಮುದ್ದುರಂಗಸ್ವಾಮಿ ಹಾಗೂ ಪೊಲೀಸ್ ಸಿಬಂದಿ ಯಶಸ್ವಿ ಕಾರ್ಯಾಚರಣೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಿಗೋಡಿ ಅವರು, ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next