Advertisement

ಕುಷ್ಟಗಿ: ಹಾವುಗಳ‌ ಕಾಟಕ್ಕೆ ಹೆದರಿದ ಅಲೆಮಾರಿ ಬುಡಕಟ್ಟು ಜನ

09:36 PM Jul 22, 2022 | Team Udayavani |

ಕುಷ್ಟಗಿ: ಪಟ್ಟಣದ ಹೊರವಲಯ ಕೃಷ್ಣಗಿರಿ ಕಾಲೋನಿಯ ನೀರಿನ ಟ್ಯಾಂಕ್ ಬಳಿ ಅಲೆಮಾರಿ ಬುಡಕಟ್ಟು ಸಮುದಾಯದವರು ವಾಸವಾಗಿರುವ ಪ್ರದೇಶದಲ್ಲಿ ಹಾವುಗಳ‌ ಕಾಟಕ್ಕೆ ಜನ ಹೆದರಿದ್ದಾರೆ‌.

Advertisement

ಈ ಪ್ರದೇಶದಲ್ಲಿ ಚರಂಡಿ, ರಸ್ತೆ ಯಾವೂದೇ ಸೌಲಭ್ಯಗಳಿಲ್ಲ. ಕೃಷ್ಣಗಿರಿ ಕಾಲೋನಿಯ ಹೊರವಲಯದಲ್ಲಿ ಚರಂಡಿ ನೀರು ನಿಂತು ಮುಳ್ಳು ಕಂಟಿ ಬೆಳೆದಿದೆ. ಕಪ್ಪು ಭೂಮಿಯ ಈ ಪ್ರದೇಶದಲ್ಲಿ ಸ್ವಲ್ಪ ಮಳೆಯಾದರೆ ಸಾಕು ರಸ್ತೆ ಕೆಸರು ಗದ್ದೆಯಾಗುತ್ತಿದೆ. ಸೊಳ್ಳೆ ಕಾಟ ಅತೀಯಾಗಿದ್ದು ರಾತ್ರಿ ಮಲಗುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯಲ್ಲಿ ಹಾವು, ವಿಷ ಜಂತುಗಳ ಭಯ ಇದೆ. ಗುರುವಾರ ಮಧ್ಯಾಹ್ನ ಎರಡು ನಾಗರಹಾವು ಪತ್ತೆಯಾಗಿವೆ.

ಸಂತ ಶಿಶುನಾಳ ಷರೀಪ ನಗರದಲ್ಲಿರುವ ಹಾವಾಡಿಗರು ಜೋಡಿ ನಾಗರಹಾವನ್ನು ಹಿಡಿದು ಭಯ ನಿವಾರಿಸಿದ್ದಾರೆ.ದಿನೇ ದಿನೇ ಪರಿಸ್ಥಿತಿ ಅಯೋಮಯವಾಗಿದ್ದು ಬಿಟ್ಟು ಹೋಗುವ ಪರಿಸ್ಥಿಗೆ ಕಾರಣವಾಗಿದ್ದು ಮಳೆಗಾಲ‌ ಮುಗಿಯುವವರೆಗೂ ಈ. ಗೋಳು ತಪ್ಪದಂತಾಗಿದೆ. ಸ್ಥಳೀಯ ನಿವಾಸಿ ಮಂಜುನಾಥ ಕಟ್ಟಿಮನಿ, ಪುರಸಭೆ ಸದಸ್ಯೆ ಗೀತಾ ಕೋಳೂರು ಈ ಪ್ರದೇಶದ ನಿವಾಸಿಗಳ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ. ಮೂಲ ಸೌಕರ್ಯಗಳ ಬಗ್ಗೆ ಪ್ರಸ್ತಾಪಿಸಿದರೂ ಪ್ರಯೋಜನೆ ಆಗಿಲ್ಲ.

ಪುರಸಭೆ ನಿರ್ಲಕ್ಷೆ ಯಿಂದ ಈ ಪ್ರದೇಶ ಮತ್ತೊಂದು ಕೊಳಗೇರಿ ಆಗಿದೆ. ನಮ್ಮ ಗೋಳು ಕೇಳುವವರು ಯಾರಿಲ್ಲ ಎಂದು ಮಂಜುನಾಥ ಕಟ್ಟಿಮನಿ ಕಳವಳ‌ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next