Advertisement

ಕುಷ್ಟಗಿ: ಆಹೋರಾತ್ರಿ ಟಗರು ಕಾಳಗ; ರಣೋತ್ಸಾಹದ ಕೇಕೆ

11:45 AM Dec 17, 2021 | Team Udayavani |

ಕುಷ್ಟಗಿ: ಮಾಣಿಕ್ಯ, ರಾಯಣ್ಣ, ಜಂಜಂ, ತಾಲೂಕಿನ ಬೆಂಚಮಟ್ಟಿ ಕೆರೆ ಅಂಗಳದಲ್ಲಿ ಆಹೋರಾತ್ರಿ ನಡೆದ ಟಗರಿನ ಕಾಳಗ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಟಗರುಗಳಿವು.

Advertisement

ಕುಷ್ಟಗಿಯ ಗಾಂಧಿನಗರದ ಆಯೋಜಕರು ಆಯೋಜಿದ್ದ ರಾಜ್ಯಮಟ್ಟದ ಟಗರಿ‌ನ ಕಾಳಗ ಸ್ಪರ್ಧೆಯ ಗುರುವಾರ ರಾತ್ರಿ9 ಕ್ಕೆ ಆರಂಭವಾಗಿ, ಶುಕ್ರವಾರ ಬೆಳಗಿನ 7 ಗಂಟೆಯವರೆಗೆ ನಡೆಯಿತು.ಕಾಂಗ್ರೆಸ್ ಯುವ ಘಟಕದ ರಾಜ್ಯ ಮಾದ್ಯಮ ವಕ್ತಾರ ಲಾಡ್ಲೆ ಮಷಾಕ್ ದೋಟಿಹಾಳ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಮುತ್ತು ರಾಠೋಡ್ ಚಾಲನೆ ನೀಡಿದರು.

ಈ ರೋಮಾಂಚಕಾರಿ ಟಗರು ಕಾಳಗದಲ್ಲಿ ಬಳ್ಳಾರಿ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಗದಗ, ಧಾರವಾಡದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಟಗರುಗಳು ಭಾಗವಹಿಸಿರುವುದು ಗಮನ ಸೆಳೆಯಿತು.

ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಪ್ರೇಕ್ಷಕರು, ಅಖಾಡದಲ್ಲಿ ಸ್ಪರ್ಧೆಗೆ ಇಳಿದ ಟಗರುಗಳನ್ನು ತುದಿಗಾಲಲ್ಲಿ ನಿಂತು, ರಣೋತ್ಸಾಹದ ಕೇಕೇಯೊಂದಿಗೆ ಹುರಿ ದುಂಬಿಸಿದರು. ರೋಮಾಂಚನಕಾರಿ ಕಾಳಗವನ್ನು ರೈತಾಪಿ ವರ್ಗ ಚಳಿಯಲ್ಲಿ‌ ನಿದ್ದೆಗೆಟ್ಟು ನೋಡಿ ಸಂಭ್ರಮಿಸಿದರು.

ಮಾಣಿಕ್ಯ ಟಗರು ಚಾಂಪಿಯನ್ ಕಿರೀಟ

Advertisement

ಬೆಳಗಿನ ಶುಕ್ರವಾರದರೆಗೂ ಮುಂದುವರಿದ ಕಾಳಗದಲ್ಲಿ ಹರಿಹರ ದ ಪಿ.ಜಿ. ರಾಘವೇಂದ್ರ ಅವರ ಮಾಣಿಕ್ಯ ಟಗರು ಪ್ರಥಮ ಸ್ಥಾನದೊಂದಿಗೆ 25 ಸಾವಿರ ರೂ.ನಗದು ಬಹುಮಾನ, ಚಾಂಪಿಯನ್ ಟ್ರೋಫಿ ತನ್ನದಾಗಿಸಿತು. ಹೂವಿನಹಡಗಲಿಯ ಕೃಷ್ಣಪ್ಪ ಅವರ ರಾಯಣ್ಣ ಟಗರು ದ್ವಿತೀಯ ಬಹುಮಾನದೊಂದಿಗೆ 15 ಸಾವಿರ ರೂ.ಗಳಿಸಿತು. ಬಾಗಲಕೋಟೆ ಜಿಲ್ಲೆಯ ಸುಳೀಬಾವಿಯ ಮಹಾಂತೇಶ ಅವರ ಜಂಜಂ ಟಗರು ತೃತೀಯ ಸ್ಥಾನದೊಂದಿಗೆ 10 ಸಾವಿರ ರೂ. ಬಹುಮಾನ ಪಡೆಯಿತು.

ಕುಷ್ಟಗಿ ತಾಲೂಕಿನ ಮನ್ನೆರಾಳ ಮುದಕಪ್ಪ ಪಾವಿ ಅವರ ಟಗರು ತೃತೀಯ ಸ್ಥಾನದೊಂದಿಗೆ 5 ಸಾವಿರ ರೂ. ಬಹುಮಾನ ಪಡೆಯಿತು.

– ಮಂಜುನಾಥ ಮಹಾಲಿಂಗಪುರ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next