Advertisement

ಕುಷ್ಟಗಿ: ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಸ್ಮರಣೆ

12:46 PM Nov 29, 2021 | Team Udayavani |

ಕುಷ್ಟಗಿ: ಹೈದರಾಬಾದ್-ಕರ್ನಾಟಕ ಯುವಶಕ್ತಿ ಸಂಘಟನೆಯ ನೇತೃತ್ವದಲ್ಲಿ,ನಗರದ ಗಜೇಂದ್ರಗಡ ರಸ್ತೆಗೆ ಹೊಂದಿಕೊಂಡಿರುವ ಹುತಾತ್ಮ ವೀರಯೋಧನ ಸಂದೀಪ್ ಉನ್ನಿಕೃಷ್ಣನ್ ನಗರದ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಮೇಣದಬತ್ತಿ ಬೆಳಗಿಸಲಾಯಿತು.

Advertisement

26-11-2008 ರಲ್ಲಿ ಮುಂಬೈನ ತಾಜ್ ಹೋಟೆಲ್ ಸೇರಿದಂತೆ ವಿವಿಧ ಜನನೀಬಿಡ ಸ್ಥಳಗಳಲ್ಲಿ ನಡೆದ, ಲಷ್ಕರ್-ಇ-ತೋಯ್ಬಾ ಉಗ್ರರ ದಾಳಿಯನ್ನು ನಿಯಂತ್ರಿಸಿ ಹಿಮ್ಮೆಟ್ಟಿಸಲು, ಎನ್ಎಸ್ ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ  ಪಾತ್ರ ಪ್ರಮುಖ ಮತ್ತು ಸ್ಮರಣೀಯ. ನ. 28 ಧೈರ್ಯ- ಸಾಹಸ, ತ್ಯಾಗದ ಬಲಿದಾನದ ಪ್ರತೀಕವಾಗಿ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು, ಕುಷ್ಟಗಿಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಗರದ ನಾಮಫಲಕ ಸ್ಥಳದಲ್ಲಿ ಮೇಣದಬತ್ತಿ ಬೆಳಗಿಸುವ ಮೂಲಕ ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ, ತಾಲೂಕು ಮಾಜಿ ಸೈನಿಕರ ಸಂಘ ಅಧ್ಯಕ್ಷ ಹಂಪನಗೌಡ ಬಳೂಟಗಿ, ಸದಸ್ಯರಾದ ಭೀಮನಗೌಡ ಜಾಲಿಹಾಳ, ಶರಣಯ್ಯ ಹಿರೇಮಠ, ಕ.ರಾ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರ ನಜೀರಸಾಬ್ ಮೂಲಿಮನಿ, ಹೈ-ಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ, ಮಂಜುನಾಥ ತಳುವಗೇರಾ, ರಾಘವೇಂದ್ರ ಕುಲಕರ್ಣಿ, ತಾಲೂಕಾಧ್ಯಕ್ಷ ಅಕ್ಬರ್ ನದಾಫ್, ಕುಷ್ಟಗಿ ನಗರ ಘಟಕದ ಅಧ್ಯಕ್ಷ ಬಸವರಾಜ ತಿಮ್ಮಾಪೂರ, ಹೋಬಳಿ ಘಟಕದ ಅಧ್ಯಕ್ಷ ಪರಶುರಾಮ ಈಳಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next