Advertisement
ಗ್ರಾಮ್ಯ ಶಾಲೆಯಾಗಿದ್ದರೂ, ಮೂಲ ಸೌಕರ್ಯಗಳು ನಗರದ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ. ಗಮನಾರ್ಹವಾದ ಈ ಬದಲಾವಣೆಗೆ ಶಿಕ್ಷಕ ರಾಜು ಭೀಮಪ್ಪ ರಾಠೊಡ್ ಅವರ ಇಚ್ಛಾಶಕ್ತಿಗೆ ಸಮುದಾಯ ಬೆನ್ನೆಲೆಬಾಗಿ ನಿಂತಿದೆ. ಎಕೋಪಾಧ್ಯಯ ಈ ಶಾಲಾ ಶಿಕ್ಷಕನಿಗೆ ಗೋಪಮ್ಮ ಹರಿಜನ ಹಾಗೂ ಮಲ್ಲಪ್ಪ ತಿಮ್ಮಾಪುರ ಅತಿಥಿ ಶಿಕ್ಷಕರು ಸಾಥ್ ನೀಡಿದ್ದಾರೆ.
Related Articles
Advertisement
ಸಮುದಾಯದ ಸಹಕಾರ: ಶಾಲೆಗೆ ಸಮುದಾಯದ ಸಹಕಾರ ಸಿಗುತ್ತಿದೆ. ಈಗಾಗಲೇ 3.50 ಲಕ್ಷ ರೂ. ಸಮುದಾಯ ದಿಂದಲೇ ಬಂದಿರುವುದು ವಿಶೇಷ ಅನಿಸಿದೆ. ಈ ಹಣದಿಂದ ಶಾಲೆಗೆ ಆಕರ್ಷಕ ಬಣ್ಣ, ಆಯಾ ವರ್ಗಕ್ಕೆ ಸಂಬಂಧಿಸಿದ ಮಾದರಿ ಚಿತ್ರಗಳನ್ನು ವರ್ಗದ ಕೊಠಡಿಯಲ್ಲಿ ಚಿತ್ರಿಸಲಾಗಿದೆ. ನಲಿ-ಕಲಿ ಮಕ್ಕಳಿಗೆ ಕಲಿಕೆಗೆ ಪೂರಕವಾಗಿ ಕುರ್ಚಿಗಳ ಆಸನದ ವ್ಯವಸ್ಥೆ ಇದೆ. ಇದರ ಜೊತೆಗೆ ಶಾಲೆಯಲ್ಲಿ ಸುಸಜ್ಜಿತ ಕೊಠಡಿ, ಬಿಸಿಯೂಟ, ಶೌಚಾಲಯ ಗ್ರಾ.ಪಂ.ಯಿಂದ ಕುಡಿಯುವ ನೀರು ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಣೆಯಲ್ಲಿದೆ.
ಶಾಲೆಯ ಮಕ್ಕಳಿಗೆ ಮೈದಾನ ಸಮಸ್ಯೆ ಎದುರಾದಾಗ ಗ್ರಾಮದವರ ಮುಂದಾಳತ್ವದಿಂದ ಗ್ರಾಮದ ಅಜ್ಜಿ ಅಂಬ್ರಮ್ಮ ಹೂಜಿ ಅವರು ಮಕ್ಕಳ ಅನುಕೂಲಕ್ಕಾಗಿ ಹಳೆ ಮನೆ ತೆರವುಗೊಳಿಸಿ ಮೈದಾನಕ್ಕೆ ಜಾಗ ನೀಡಿದರು. ಆಟದ ಮೈದಾನ ವಿಸ್ತರಣೆ ಹಾಗೂ ಶಾಲೆಯ ಕೈತೋಟಕ್ಕೆ ಇನ್ನಷ್ಟು ಜಾಗೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಲೆಗೆ ಅಗತ್ಯ ಇರುವ ಜಾಗದ ಖರೀದಿಗೂ ಮುಂದಾಗಿದ್ದಾರೆ. ಇನ್ನೂ ಶಾಲೆಗೆ ಕಾಂಪೌಂಡ್ ಹಾಗೂ ಶುದ್ಧ ನೀರಿನ ಘಟಕ ಅಗತ್ಯವಾಗಿದೆ. ಇಷ್ಟೆಲ್ಲಾ ಬೇಡಿಕೆ ಈಡೇರಿರುವಾಗ ಈ ಬೇಡಿಕೆಗಳು ಸಮುದಾಯದಿಂದ ಇಲ್ಲವೇ ಜನಪ್ರತಿನಿ ಧಿಗಳಿಂದ ಈಡೇರುವ ವಿಶ್ವಾಸ ವ್ಯಕ್ತವಾಗಿದೆ.
ಮಕ್ಕಳಿಗೆ ಶಾಲೆ ಎಂದರೆ ಅಚ್ಚುಮೆಚ್ಚು ಆಗಿದ್ದು, ಸ್ಮಾರ್ಟ್ ಟಿವಿ ಮೂಲಕ ಶಿಕ್ಷಣದಿಂದ ಮಕ್ಕಳು ಏಕಾಗ್ರತೆಯಿಂದ ಕಲಿಕೆಯಲ್ಲಿ ನಿರತರಾಗಿದ್ದಾರೆ.ರಾಜು ರಾಠೊಡ್, ಶಿಕ್ಷಕ ಶಿಕ್ಷಕ ರಾಜು ರಾಠೊಡ್ ಅವರು ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆ ಕಾರ್ಯ ಚಟುವಟಿಕೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಗ್ರಾಮೀಣ ಶಾಲೆ ಆಧುನಿಕ ಶಿಕ್ಷಣ ವ್ಯವಸ್ಥೆ ಮಕ್ಕಳ ಕಲಿಕೆಗೆ ಪ್ರೇರಣಾತ್ಮಕ ಹಾಗೂ ಪರಿಮಾಣಾತ್ಮಕವಾಗಿದೆ. ಸುರೇಂದ್ರ ಕಾಂಬ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಕುಷ್ಟಗಿ -ಮಂಜುನಾಥ ಮಹಾಲಿಂಗಪುರ