Advertisement

ಕುಷ್ಟಗಿ: ಚತುಷ್ಪಥ ರಾ. ಹೆ. ಅತಾಂತ್ರಿಕ ಕಾಮಗಾರಿ: ಅಪಘಾತದ ಬಳಿಕ ಎಚ್ಚೆತ್ತ ಗುತ್ತಿಗೆ ಕಂಪನಿ

01:22 PM Jul 24, 2022 | Team Udayavani |

ಕುಷ್ಟಗಿ: ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಾಂತ್ರಿಕ ಕಾಮಗಾರಿಯಿಂದ ಮಳೆ ನೀರು ನಿಂತ ಪರಿಣಾಮ ರಸ್ತೆ ಅವಘಡ ಸಂಭವಿಸಿದ ಹಿನ್ನೆಲೆ ಎಚ್ಚೆತ್ತುಕೊಂಡ ಓಎಸ್ ಇ ಕಂಪನಿ ಕಡೆಗೂ ಕ್ರಮ ವಹಿಸಿದೆ.

Advertisement

ಶನಿವಾರ ಸಂಜೆ ಮಳೆಯ ಸಂದರ್ಭ ಹೆದ್ದಾರಿಯಲ್ಲಿ ಮಳೆ ನೀರು ನೀಂತ ಪರಿಣಾಮ ಕಾರು ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿತ್ತು. ಕಾರಿನಲ್ಲಿ ಏರ್ ಬ್ಯಾಗ್ ಬಲೂನ್ ತೆರೆದುಕೊಂಡ ಹಿನ್ನೆಲೆ ಪ್ರಯಾಣಿಕರ ಪವಾಡ ಸದೃಶರಾಗಿ ಪಾರಾಗಿದ್ದರು.

ಈ ಪ್ರಕರಣದ ಬಳಿಕ ಹೆದ್ದಾರಿಯ ಗುತ್ತಿಗೆ ನಿರ್ವಹಿಸುವ ಓಎಸ್ ಇ ಕಂಪನಿ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಈ ಬೆಳವಣಿಗೆ ಹಿನ್ನೆಲೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು, ಸಂಬಂಧಿಸಿದ ಅಧಿಕಾರಿಗೆ ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲು ಸೂಚಿಸಿದ್ದು, ಇಂತಹ ಪ್ರಕರಣ ಮರುಕಳಿಸಿದರೆ ಓಎಸ್ ಇ ಕಂಪನಿ ಮುಖ್ಯಸ್ಥರ ವಿರುದ್ದ ಎಂ.ಐ.ಆರ್ ಮಾಡುವುದಾಗಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next