Advertisement

Kushtagi; ನಿಡಶೇಸಿ ಕೆರೆ ಕಾಲುವೆ ಗೇಟ್ ಕಟ್ ಆತಂಕ: ರೈತರಿಗೆ ಆತಂಕ ತಂದ ನೀರು ಸೋರಿಕೆ

08:41 AM Aug 18, 2024 | Team Udayavani |

ಕುಷ್ಟಗಿ: ತಾಲೂಕಿನ ನಿಡಶೇಸಿಯ ಕೆರೆಯ ಬಂಡ್ ಕಾಲುವೆ ಗೇಟ್ ಕೆಳ ಭಾಗದಲ್ಲಿ ನೀರು ಸೋರಿಕೆಯಾಗುತ್ತಿದ್ದು, ಕೆರೆಯ ಕೆಳ ಭಾಗದ ರೈತರಲ್ಲಿ ಅತಂಕ ವ್ಯಕ್ತವಾಗಿದೆ.

Advertisement

ಶನಿವಾರದ ಮಳೆಯಿಂದ ಕೆರೆಗೆ ನೀರು ಹರಿದು ಬರುತ್ತಿದ್ದು ಸದ್ಯ ಕೆರೆ ಶೇ.80 ರಷ್ಟು ಭರ್ತಿಯಾಗಿದ್ದು ರೈತರು ಸಂತಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೆರೆಯ ಕಾಲುವೆಯ ಭಾಗದಲ್ಲಿ ನೀರು ಸೋರಿಕೆಯಾಗುತ್ತಿದ್ದು, ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆ ಎಇಇ ಶ್ರೀನಿವಾಸಗೆ ವಿಷಯ ತಿಳಿಸಿದ್ದಾರೆ. ಸದರಿ ಜೆಇ ಕಾಯುತ್ತಾ ಕುಳಿತಿರಲು ಆಗುತ್ತಾ ಎಂದು ಉಡಾಫೆ ಉತ್ತರ ನೀಡಿರುವುದು ರೈತರ ಆಕ್ರೊಶಕ್ಕೆ ಕಾರಣವಾಗಿದೆ.

ನಿಡಶೇಸಿ ಕೆರೆ ಕಟ್ಟೆಯಲ್ಲಿ ನೀರು ಜಮಾಯಿಸುತ್ತಿರುವ ಸಂದರ್ಭದಲ್ಲಿ ಕೆರೆ ಪಾತ್ರದ ಜನರಿಗೆ ಈ ಬೆಳವಣಿಗೆ ರೈತರಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ. ಕೆರೆಯ ತೂಬಿನ ಗೇಟ್ ಕಿತ್ತಿರುವುದರಿಂದ ಅಪಾರ ಪ್ರಮಾಣದಲ್ಲಿ ನೀರು ಕಾಲುವೆ ಮೂಲಕ ಹಳ್ಳಕ್ಕೆ ಹರಿಯುತ್ತಿರುದು ಕೆಳ ಭಾಗದ ರೈತ ಶರಣಪ್ಪ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಆತಂಕದಿಂದ ಓಡಿ ಬಂದು ಇತರೇ ರೈತರಿಗೆ ಮಾಹಿತಿ ನೀಡಿದ್ದಾರೆ.  ನಿಡಶೇಸಿ ಕೆರೆ ಅಭದ್ರತೆ ಆತಂಕ ವ್ಯಕ್ತವಾಗಿದೆ.

ಕೂಡಲೇ ಕೆರೆಯ ಕಾಲುವೆ ಗೇಟ್ ಬಂದ್ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next