ಕುಷ್ಟಗಿ: ಅನೈತಿಕ ಸಂಬಂಧ ಮಾಜಿ ಪ್ರಿಯಕರ ಕೊಲೆಯಲ್ಲಿ ಅಂತ್ಯವಾಗಿದ್ದು, ಈ ಸಂಬಂಧ ಮೂವರ ವಿರುದ್ದ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಂಟರಠಾಣ ಗ್ರಾಮದ ವಿವಾಹಿತ ಶ್ರೀಕಾಂತ ಮಾದೇಗೌಡ ಮರೋಳ (28) ಮೃತ ದುರ್ದೈವಿ.
ಶ್ರೀಕಾಂತ್ ಗೆ ಅದೇ ಗ್ರಾಮದ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧವಿತ್ತು. ಕೆಲವು ದಿನಗಳ ಹಿಂದೆ ಅನೈತಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಪರ್ಕ ಕಡಿದುಕೊಂಡಿದ್ದ.
ಇದಾದ ಬಳಿಕ ವಿವಾಹಿತೆ ಅದೇ ಗ್ರಾಮ ರಮೇಶ ಬೈಲಕೂರನೊಂದಿಗೆ ಅನೈತಿಕ ಸಂಪರ್ಕ ಮುಂದುವರೆದಿತ್ತು. ಶ್ರೀಕಾಂತ್ ಗೆ ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಕರ ಪದೇ ಪದೇ ಫೋನ್ ಮಾಡಿ ಟಾರ್ಚರ್ ನೀಡಲಾರಂಭಿಸಿದ್ದ. ಈ ವಿಷಯವನ್ನು ಪ್ರಿಯಕರ ರಮೇಶ ಬೈಲಕೂರಗೆ ತಿಳಿಸಿದ್ದಳು.
ನಂತರ ವಿವಾಹಿತೆ ಹಾಗೂ ಪ್ರಿಯಕರ ಸೇರಿ ಮಾಜಿ ಪ್ರಿಯಕರನನ್ನು ಕರೆಯಿಸಿ, ಹಲ್ಲೆ ನಡೆಸಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ನಂತರ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಆರೋಗ್ಯ ಚೇತರಿಸಿಕೊಂಡು ಹಲ್ಲೆ ನಡೆಸಿದ ಮೂವರ ಹೆಸರು ತಿಳಿಸಿದ್ದ. ತಮ್ಮ ಮೇಲೆ ಪ್ರಕರಣ ದಾಖಲಿಸಿದರೆ ಜೀವ ಸಹಿತ ಬಿಡುವುದಿಲ್ಲ ಎನ್ನುವ ಆರೋಪಿಗಳ ಬೆದರಿಕೆಗೆ ಭಯಭೀತನಾಗಿ ಶ್ರೀಕಾಂತ್ ಮರೊಳ ಮೃತಪಟ್ಟಿದ್ದಾನೆ.
ಪತ್ನಿಯ ದೂರಿನ ಮೇರೆಗೆ ಪ್ರಕರಣ ರಮೇಶ ಬೈಲಕೂರ, ನಾಗರಾಜ್ ಹಾವಣ್ಣವರ್ ಹಾಗೂ ಮಂಜುಳಾ ಪೊಲೀಸ್ ಪಾಟೀಲ ವಿರುದ್ದ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.