ಕುಷ್ಟಗಿ: ಅತೀಯಾದ ಕುಡಿತಕ್ಕೆ ತಾಯಿಯ ಬುದ್ದಿವಾದ ಸಹಿಸದ ಸಿಂಧನೂರು ಮೂಲದ ಯುವಕನ ಶವ ಕುಷ್ಟಗಿ ತಾಲೂಕಿನ ತಾವರಗೇರಾ ಸೀಮಾದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಿಂಧನೂರು ತಾಲೂಕಿನ ವೀರಾಪೂರ ಗ್ರಾಮದ ಶ್ಯಾಮಣ್ಣ ಮಾದರ್ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಯುವಕ.
ಶ್ಯಾಮಣ್ಣಗೆ ಕುಡಿತದ ಚಟವಿತ್ತು. ಅತೀಯಾದ ಕುಡಿತಕ್ಕೆ ತಾಯಿ ದೇವಮ್ಮಳ ಬುದ್ದಿ ಮಾತು ಹೇಳುತ್ತಿದ್ದು, ಇದರಿಂದ ಬೇಸತ್ತ ಯುವಕ ಡಿ.29 ರಂದು ಮನೆ ತೊರೆದಿದ್ದ. ಬಳಿಕ ಈತ ಎಲ್ಲಿಯೂ ಪತ್ತೆಯಾಗದೆ ಇದ್ದಾಗ ಜ.1 ರಂದು ಸಂಬಂಧಿಕರು ತುರ್ವಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜ.15ರಂದು ತಾವರಗೇರಾ ಸೀಮಾದ ಶೇಖರಗೌಡ ಅವರ ಜಮೀನಿನಲ್ಲಿ ಬೇವಿನ ಗಿಡದಲ್ಲಿ ಪಕ್ಕ ಅಪರಿಚಿತ ವ್ಯಕ್ತಿಯ ಕೊಳೆತ ಶವ ಗಮನಿಸಿದ ಅಲ್ಲಿನ ಸ್ಥಳೀಯ ಹನುಮಂತ ವಾಲ್ಮಿಕಿ ತಾವರಗೇರಾ ಠಾಣೆಗೆ ಮಾಹಿತಿ ನೀಡಿದ್ದಾನೆ.
ಯುವಕ ಶ್ಯಾಮಣ್ಣ ಮಾದರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಜೇಬಿನಲ್ಲಿದ್ದ ಆಧಾರ ಕಾರ್ಡ್ ಆಧರಿಸಿ ಶವ ಪತ್ತೆ ಕಾರ್ಯ ಸುಲಭ ಸಾದ್ಯವಾಗಿದೆ ಎಂದು ತಾವರಗೇರಾ ಪಿಎಸೈ ಪುಂಡಪ್ಪ ಮಾಹಿತಿ ನೀಡಿದ್ದಾರೆ.