ಕುಷ್ಟಗಿ: ಬೆಳೆದು ನಿಂತ ಫಸಲಿಗೆ ಹಕ್ಕಿ ಕಾಟ ತಪ್ಪಿಸಲು ರೈತರೊಬ್ಬರ ಖರ್ಚಿಲ್ಲದ ಖಾಲಿ ಬೀಯರ್ ಬಾಟಲಿಯ ಪ್ರಯೋಗ ಪರಿಣಾಮಕಾರಿಯಾಗಿದೆ.
ಕಡೇಕೊಪ್ಪ ಗ್ರಾಮದ ರೈತ ಬಸವರಾಜ್ ವ್ಹಿ ಜೀಗೇರಿ ಎಂಬವರು ಮುಂಗಾರು ಹಂಗಾಮಿನ ಸಜ್ಜೆ ಬೆಳೆದಿದ್ದಾರೆ. ಸದ್ಯ ಹಾಲ್ದೆನೆಯ ಕಾಳು ಕಟ್ಟಿದ್ದು ಹಕ್ಕಿಕಾಟ ಅತಿಯಾಗಿತ್ತು.
ಹಕ್ಕಿಗಳನ್ನು ನಿಯಂತ್ರಿಸಲು ತಟ್ಟೆಯ ಸದ್ದು ಮಾಡಿದ್ದು ಆಯ್ತು, ಕೂಗಾಡಿದ್ದು ಆಯ್ತು. ವಿವಿಧ ರೀತಿಯಾಗಿ ಪ್ರಯತ್ನಗಳನ್ನು ಮಾಡಿದರೂ ಹಕ್ಕಿಗಳು ನಿಯಂತ್ರಣಕ್ಕೆ ಬರಲಿಲ್ಲ.
ಹೀಗಾಗಿ ಸುಲಭ ಉಪಯವಾಗಿ ಖಾಲಿ ಬೀಯರ್ ಬಾಟಲಿ ತೆಗೆದುಕೊಂಡು ಮರದ ಟೊಂಗೆಗೆ ಜೋತು ಬಿಟ್ಟಿದ್ದಾರೆ. ಮರಗಳಿಲ್ಲದ ಕಡೆ ಬೊಂಬು ನೆಟ್ಟು ಖಾಲಿ ಬೀಯರ್ ಬಾಟಲಿ ಜೋತು ಬಿಟ್ಟಿದ್ದಾರೆ. ಈ ಪ್ರಯೋಗ ಯಶಸ್ವಿಯಾಗುತ್ತಿದ್ದು, ಗಾಳಿಗೆ ಬಾಟಲಿ ಅಲ್ಲಾಡಿ ಒಂದಕ್ಕೊಂದು ಸ್ಪರ್ಷಿಸಿ ಟನ್ ಟನ್ ಎಂಬ ಸದ್ದಿಗೆ ಹಕ್ಕಿಗಳು ಆ ಕಡೆ ಬರದೆ ಾದರ ಉಪಟಳ ಕಡಿಮೆಯಾಗಿದೆ.
ಕಡೇಕೊಪ್ಪ ಗ್ರಾಮದ ಈ ರೈತನ ಪ್ರಯೋಗ ಗಮನ ಸೆಳೆದ ಹಿನ್ನೆಲೆಯಲ್ಲಿ ಇತರೇ ರೈತರು ಹಳೆ ಖಾಲಿ ಬಾಟಲಿ ಖರ್ಚಿಲ್ಲದ ಪ್ರಯೋಗ ಅಳವಡಿಸಿಕೊಂಡಿದ್ದಾರೆ.