ಕುಷ್ಟಗಿ:ಜ.26 ಗಣರಾಜ್ಯೋತ್ಸವ ಪ್ರಯುಕ್ತ ಸಮುದಾಯ ಘಟಕದಿಂದ ಮಹಾದೇವ ಬಣಕಾರ ಅವರ ಉರಿಲಿಂಗ ಪೆದ್ದಿ ನಾಟಕವನ್ನು ಸ್ಥಳೀಯ ಹವ್ಯಾಸಿ ಕಲಾವಿದರಿಂದ ಅಭಿನಯಿಸಲು ನಿರ್ಧರಿಸಲಾಗಿದೆ.
ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸಮುಧಾಯ ಘಟಕದ ತಾಲೂಕಾ ಘಟಕದ ಪುನರ್ ರಚನೆ ಹಾಗೂ ಉರಿಲಿಂಗ ಪೆದ್ದಿ ನಾಟಕ ಪ್ರದರ್ಶನ ಕುರಿತಾಗಿ ನಡೆದ ಸಭೆಯಲ್ಲಿ ಸಮುಧಾಯ ಘಟಕದ ನೇತೃತ್ವದಲ್ಲಿ ಉರಿಲಿಂಗ ಪೆದ್ದಿ ನಾಟಕವನ್ನು ರಂಗ ನಿದರ್ೇಶಕ ವೈ.ಡಿ. ಬದಾಮಿ, ಮಂಜುಳಾ ವೈ.ಡಿ. ಬದಾಮಿ ನಿರ್ದೇಶನದಲ್ಲಿ ಅಭಿನಯಿಸಲು ಸಭೆ ಒಮ್ಮತದ ನಿರ್ಣಯ ಕೈಗೊಂಡಿತು.
ಮುಂಬರುವ ಜನವರಿ 5ರಿಂದ ರಂಗ ತಾಲೀಮು ನಡೆಸಲು ನಿರ್ಣಯಿಸಿದ್ದು, ಈ ಹಿನ್ನೆಲೆಯಲ್ಲಿ ಪಾತ್ರಗಳ ಹಂಚಿಕೆ ಆಸಕ್ತರು ಮುಂದೆ ಬಂದರೆ ಸ್ಥಳೀಯ ಉದಯೋನ್ಮುಖ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಮುಧಾಯ ಘಟಕದ ನೂತನ ಅಧ್ಯಕ್ಷ ನಭಿಸಾಬ್ ಕುಷ್ಟಗಿ ತಿಳಿಸಿದ್ದಾರೆ. ಅಭಿನಯಿಸಲು ಇಚ್ಚಿಸುವ ಕಲಾವಿದರು, 9902573627, 9611359846, 9880563852 ಮೋಬೈಲ್ ಸಂಖ್ಯೆಯನ್ನು ಸಂಪಕರ್ಿಸಲು ಮನವಿ ಮಾಡಲಾಗಿದೆ. ಸಮುಧಾಯ ಘಟಕದ ರಾಜ್ಯ ಕಾರ್ಯದಶರ್ಿ ಎಸ್. ದೇವೇಂದ್ರಗೌಡ, ಮೋಹನಲಾಲ್ ಜೈನ್, ಬಸವರಾಜ ಉಪ್ಪಲದಿನ್ನಿ ಇದ್ದರು.
ಪಧಾಧಿಕಾರಿಗಳು: ನಭಿಸಾಬ್ ಕುಷ್ಟಗಿ ( ಅಧ್ಯಕ್ಷ), ಬಿ.ಎಂ. ಕಂಬಳಿ, ಮೀನಾಕ್ಷಿ ಜೋಷಿ (ಗೌರವಾಧ್ಯಕ್ಷರು), ಅಡಿವೆಪ್ಪ ಕುಷ್ಟಗಿ, ಮಲ್ಲನಗೌಡ ಅಗಸಿಮುಂದಿನ, ರವೀಂದ್ರ ಬಾಕಳೆ, ಶರಣಪ್ಪ ಬನ್ನಿಗೋಳ (ಉಪಾಧ್ಯಕ್ಷರು), ಹನಮಂತಪ್ಪ ಬಿಜಕಲ್ (ಪ್ರಧಾನ ಕಾರ್ಯದಶರ್ಿ), ದೊಡ್ಡಪ್ಪ ಕೈಲವಾಡಗಿ (ಜಂಟಿ ಕಾರ್ಯದರ್ಶಿ), ಹನಮಂತಪ್ಪ ಕಂದಕೂರು (ಖಜಾಂಚಿ), ಬಸವರಾಜ ಗಾಣಗೇರ, ಪಂಪಣ್ಣ ಹಿರೇಮನ್ನಾಪೂರ, ನಾಗರಾಜ ಪಟ್ಟಣಶೆಟ್ಟರ್ (ಕಾರ್ಯದರ್ಶಿಗಳು), ಲಲಿತಮ್ಮ ಹಿರೇಮಠ (ಮಹಿಳಾ ಪ್ರತಿನಿಧಿ), ಶರಣಪ್ಪ ವಡಿಗೇರಿ (ಗೌರವ ಸಲಹೆಗಾರ) ನೇಮಿಸಲಾಗಿದೆ.