ಪೂರೈಸುವುದು ಮೊದಲಾದ್ಯತೆಯಾಗಿರಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.
Advertisement
ಇಲ್ಲಿನ ತಾಪಂ ಸಭಾಂಗಣದಲ್ಲಿ ಕೊರೊನಾ ವೈರಸ್ ಜಾಗೃತಿ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಕುರಿತು ನಡೆದ ತುರ್ತುಸಭೆಯಲ್ಲಿ ಗ್ರಾಪಂ ಪಿಡಿಒಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬೇಸಿಗೆ ಆರಂಭವಾಗಿದ್ದು, ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿಕೊಂಡು ಸಮಸ್ಯೆ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ನಿರ್ವಹಿಸಬೇಕಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ವಲಸೆ ಹೋಗಿ ಸ್ವಗ್ರಾಮಕ್ಕೆ ವಾಪಸ್ಸಾದವರು, ವಿದೇಶದಿಂದ ಸ್ವಗ್ರಾಮಕ್ಕೆ ಬಂದವರು ಗ್ರಾಮಗಳಲ್ಲಿ ಅನಗತ್ಯವಾಗಿ ಸಂಚರಿಸದಂತೆ ನಿಗಾವಹಿಸಬೇಕು. ಪ್ರತಿ ಗ್ರಾಮಗಳಲ್ಲೂ ಸ್ವತ್ಛತೆ ಮುಖ್ಯವಾಗಿದ್ದು, ಚರಂಡಿಗಳಲ್ಲಿ ಕ್ರಿಮಿನಾಶಕವನ್ನು ರೈತರು ಬಳಸುವ
ಸ್ಪ್ರೆಯರ್‌ದಿಂದ ಬಳಸಿದರೆ ಪರಿಣಾಮಕಾರಿ. ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಸಭೆ ಜಿಪಂ ಸಿಇಒ ಸಭೆ ಕರೆಯುವುದು ಸಾದ್ಯತೆ ಕಡಿಮೆ. ಹೀಗಾಗಿ ಕುಡಿಯುವ ನಿರಿನ ಸಮಸ್ಯೆ ನಿರ್ವಹಣೆಗಾಗಿ ಪ್ರತ್ಯೇಕವಾಗಿ ತಾಲೂಕಿನ 7 ಜಿಪಂ ಸದಸ್ಯರ ಸಭೆ ಆಯೋಜಿಸಿ ಬಳಕೆಯಾಗದ ಅನುದಾನವನ್ನು ಬಳಸಿಕೊಂಡರೆ ಈಗಿನ ಪರಿಸ್ಥಿತಿಯಲ್ಲಿ ಪ್ರತಿ ಗ್ರಾಪಂಗೆ 50 ಸಾವಿರ ರೂ. ಹಂಚಿಕೆಯಾದರೂ ಎಷ್ಟೋ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ
ಕ್ರಮಗಳನ್ನು ಕೈಗೊಳ್ಳಲು ಸಾದ್ಯವಾಗುತ್ತದೆ ಎಂದರು. ಜಿಪಂ ಸದಸ್ಯರಾದ ಕೆ. ಮಹೇಶ, ಭೀಮಣ್ಣ ಅಗಸಿಮುಂದಿನ, ಹನುಮಗೌಡ ಪಾಟೀಲ, ತಾಪಂ ಇಒ ಕೆ. ತಿಮ್ಮಪ್ಪ, ನರೇಗಾ ಸಹಾಯಕ ನಿರ್ದೇಶಕ ಅರುಣಕುಮಾರ ದಳವಾಯಿ ಇತರರಿದ್ದರು.