ಕುಷ್ಟಗಿ: ಕುಷ್ಟಗಿ ಪುರಸಭೆಯ ಮುಖ್ಯಾಧಿಕಾರಿ ಉಮೇಶ ಹಿರೇಮಠ ಸಮಯ ಪಾಲನೆ ಮಾಡದಿರುವುದಕ್ಕೆ ಕಾಂಗ್ರೆಸ್ ಪುರಸಭೆ ಸದಸ್ಯರು ಆಕ್ರೋಶ ಹೊರಹಾಕಿದರು.
ಪುರಸಭೆ ನಿಗದಿತ ಕಛೇರಿ ಸಮಯಕ್ಕೆ ಬಾರದೇ ಇರುವುದು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಕಾಂಗ್ರೆಸ್ ಸದಸ್ಯರ ವಿಷಯದಲ್ಲಿ ಮುಖ್ಯಾಧಿಕಾರಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿದ ಸದಸ್ಯರು, ಕಛೇರಿಗೆ ಬಂದರೆ ಮುಖ್ಯಾಧಿಕಾರಿಗಳೇ ಇಲ್ಲ. ಮೊಬೈಲ್ ಮೂಲಕ ಸಂಪರ್ಕಿಸಿದರೆ ಸ್ವೀಕರಿಸುತ್ತಿಲ್ಲ. ಒತ್ತುವರಿ ತೆರವು ವಿಷಯದಲ್ಲಿ ತಾರತಮ್ಯವಹಿಸುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ತಡವಾಗಿ ಬಂದ ಮುಖ್ಯಾಧಿಕಾರಿಯನ್ನು ಸದಸ್ಯರಾದ ಚಿರಂಜೀವಿ ಹಿರೇಮಠ, ವಸಂತ ಮೇಲಿನಮನಿ, ರಾಮಣ್ಣ ಬಿನ್ನಾಳ ಸೇರಿದಂತೆ ಶೌಕತ್ ಕಾಯಿಗಡ್ಡಿ, ಮಂಜುನಾಥ ಕಟ್ಟಿಮನಿ, ಯಮನೂರು ಸಂಗಟಿ ಮೊದಲಾದವರು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಅರಮನೆಯಲ್ಲಿ ನಾಳೆ ರಾವತ್, ಪುನೀತ್‌ಗೆ ಪುಷ್ಪ ನಮನ : ಫಲಪುಷ್ಪ ಪ್ರದರ್ಶನ
ಪುರಸಭೆ ಅಧ್ಯಕ್ಷ ಸೇರಿಕೊಂಡು, ಬೋಗಸ್ ಬಿಲ್ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ ಸದಸ್ಯರನ್ನು ಯಾವುದೇ ಅಭಿವೃದ್ಧಿ ವಿಷಯದಲ್ಲಿ ಪುರಸಭೆ ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸದಸ್ಯರು ಹೇಳುವ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೆಇಬಿ ಬಳಿ ಇರುವ ಪುರಸಭೆ ಮಳಿಗೆಯವರು ಹಲವು ವರ್ಷಗಳಿಂದ ತೀರಾ ಕಡಿಮೆ ಬಾಡಿಗೆ ವಸೂಲಿ ಮಾಡುತ್ತಿದ್ದು ತೆರವುಗೊಳಿಸಿ ಟೆಂಡರ್ ಹರಾಜ್ ಮಾಡಿಲ್ಲ. ಹರಾಜು ಮಾಡದೇ ಇದ್ದರೆ ಮುಖ್ಯಾಧಿಕಾರಿ ವಿರುದ್ದ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದ ಸದಸ್ಯರು, ಮುಖ್ಯಾಧಿಕಾರಿಗೆ ದಾರಿ ತಪ್ಪಿಸಿ ಬಲಿ ಪಶು ಮಾಡಲಾಗುತ್ತಿದೆ. ಪಟ್ಟಣದಲ್ಲಿ ಚರಂಡಿಗಳು ಭರ್ತಿಯಾಗಿದ್ದು ಗಬ್ಬೆದ್ದು ನಾರುತ್ತಿದ್ದು, ಪಟ್ಟಣದ ಮುಖ್ಯ ರಸ್ತೆಗಳು ಹಾಳಾಗಿವೆ. ಧೂಳು ನಿಯಂತ್ರಿಸಲು ಟ್ಯಾಂಕರ್ ನಿಂದ ನೀರು ಚಿಮುಕಿಸುತ್ತಿದ್ದಾರೆ. ಕಳೆದ 6 ತಿಂಗಳಿನಿಂದ ಸಾಮಾನ್ಯ ನಿಧಿಯಿಂದ ಖರ್ಚು ಮಾಡಿದ ವಿವರ ನೀಡಬೇಕೆಂದು ಒತ್ತಾಯಿಸಿದರು.