ಕುಷ್ಟಗಿ: ಕುಷ್ಟಗಿ ಪಟ್ಟಣ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ಅತಿಕ್ರಮಣಗೊಂಡಿರುವ ಕಟ್ಟಡಗಳ ಜೆಸಿಬಿಯೊಂದಿಗೆ ತೆರವು ಕಾರ್ಯಾಚರಣೆಗೆ ಇಳಿದ ಪುರಸಭೆ ನಡೆಗೆ ಸ್ಥಳೀಯ ಬೀದಿಯ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಯಿತು.
ಪುರಸಭೆ ಮುಖ್ಯಾಧಿಕಾರಿ ಉಮೇ ಶ ಹಿರೇಮಠ, ಪಿಎಸೈ ತಿಮ್ಮಣ್ಣ ನಾಯಕ ನೇತೃತ್ವದಲ್ಲಿ ದಲ್ಲಿ ಏಕಾಏಕಿ ಕಾರ್ಯಚರಣೆಗೆ ತಬ್ಬಿಬ್ಬಾದ ಬೀದಿ ಬದಿ ವ್ಯಾಪಾತಸ್ಥರು ಹಾಗೂ ಗೂಡಂಗಡಿಕಾರರು ವಿರೋಧ ವ್ಯಕ್ತಪಡಿಸಿರಲ್ಲದೇ ತರಾಟೆಗೆ ತೆಗೆದುಕೊಂಡಾಗ ಗೊಂದಲದ ಪರಿಸ್ಥಿಗೆ ಕಾರಣವಾಯಿತು.
ಒಂದೆಡೆ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಕಾರ್ಡ, ಸಾಲ ಸೌಲಭ್ಯ ನೀಡುವುದು ಒಂದೆಡೆಯಾದರೆ ಇನ್ನೊಂದೆಡೆ ಏಕಾಏಕಿಯಾಗಿ ಬೀದಿ ಬದಿಯಿಂದ ಒಕ್ಕಲೆಬ್ಬಿಸುತ್ತೀರೆಂದು ಪ್ರಶ್ನಿಸಿದ ಬೀದಿಬದಿ ವ್ಯಾಪಾರಸ್ಥರು ಇಲ್ಲಿಂದ ಕದಲುವುದಿಲ್ಲ ಪಟ್ಟು ಹಿಡಿದರು.
ಖಾಸಗಿ ಹಾಗೂ ವಕೀಲರು ನಿರ್ಮಿಸಿರುವ ಡಬ್ಬಾ ಅಂಗಡಿ ತೆರವುಗೊಳಿಸದೇ ನಮ್ಮನ್ನೇಕೆ ತೆರವುಗೊಳಿಸುತ್ತಿರಿ? ನಮಗೊಂದು ನ್ಯಾಯ ಅವರಿಗೊಂದು ನ್ಯಾಯ? ಎಂದು ಆಕ್ರೋಶ ಹೊರ ಹಾಕಿದರು. ಮುಖ್ಯಾಧಿಕಾರಿ ಉಮೇಶ ಹಿರೇಮಠ ಸಮಾಜಾಯಿಷಿ ನೀಡಿ, ಮುಖ್ಯರಸ್ತೆಗಳ ಅಗಲ 80 ಅಡಿ ಮಿತಿ ಇದೆ. ರಸ್ತೆಯ ಅತಿಕ್ರಮಿತ ಕಟ್ಟಡ ತೆರವುಗೊಳಿಸುವುದು ಅನಿವಾರ್ಯವಾಗಿದೆ. ಬೀದಿ ಬದಿ ವ್ಯಾಪಾರಸ್ಥರಿಗೆ ಸಂತೆ ಮೈದಾನದಲ್ಲಿ ಅವಕಾಶವಿದೆ. ಬದಲಿಗೆ ಪುಟ್ ಪಾತ್ ನಲ್ಲಿ ಅವಕಾಶವಿಲ್ಲ ಸ್ಪಷ್ಟಪಡಿಸಿದರು. ಈಗಾಗಲೇ ಅತಿಕ್ರಮಿತ ಕಟ್ಟಡ ತೆರವುಗೊಳಿಸಲು ಅವಕಾಶ ನೀಡಿದ್ದರೂ ತೆರವುಗೊಳಿಸಿಲ್ಲ. ಹೀಗಾಗಿ ಕಾರ್ಯಾಚರಣೆಗೆ ಮುಂದಾಗಿದ್ದು, ತಾವೇ ತೆರವುಗೊಳಿಸುವುದಾದಲ್ಲಿ ಅಂತಹುಗಳಿಗೆ ತೆರವಿಗೆ ಅವಕಾಶ ಕಲ್ಪಿಸಿದ್ದೇವೆ ಎಂದರು.