ಕುಷ್ಟಗಿ: ತೆರವಾದ ಚಳಗೇರಾ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆನಡೆದ ಬುಧವಾರ ತುರುಸಿನ ಚುನಾವಣೆ ನಡೆಯಿತು. ಒಟ್ಟು24 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಮಹಾದೇವಪ್ಪ ಹಡಪದ, ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಮ್ಮ ಲಕ್ಷ್ಮಣ ಜಾಲಿ ಬಿಜೆಪಿ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದರು.
ಪ್ರತಿ ಸ್ಪರ್ದಿಯಾಗಿ ಕಾಂಗ್ರೆಸ್ ಬೆಂಬಲಿತ ಮಾರುತಿ ಯಮನಪ್ಪ ಗಡಾದ್ ಅಧ್ಯಕ್ಷ ಸ್ಥಾನಕ್ಕೆ, ನಿಂಬೆಮ್ಮ ದೇವೇಂದ್ರಪ್ಪ ಕತ್ತಿ ಸ್ಪರ್ದಿಸಿದ್ದರು. ಚುನಾವಣಾಧಿಕಾರಿ ತಹಸೀಲ್ದಾರ ಎಂ.ಸಿದ್ದೇಶ ಸಮ್ಮುಖದಲ್ಲಿ ನಡೆದ ಈ ಚುನಾವಣೆಯಲ್ಲಿ 24 ಸದಸ್ಯರ ಪೈಕಿ, 23 ಸದಸ್ಯರು ಹಾಜರಿದ್ದರು. ಚಳಗೇರಾ ಸದಸ್ಯ ಶರಣಬಸವ ಗಾಡಗೋಳಿ ತಟಸ್ಥರಾಗಿ ಚುನಾವಣೆಯಿಂದ ದೂರ ಉಳಿದರು.
ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅದ್ಯಕ್ಷ ಸ್ಥಾನದ ಅಭ್ಯರ್ಥಿ ಮಹಾಂತೇಶ ಹಡಪದ, ಉಪಾದ್ಯಕ್ಷ ಸ್ಥಾನ ಅಭ್ಯರ್ಥಿ ಅವರಿಗೆ ಪ್ರತ್ಯೇಕವಾಗಿ ತಲಾ 13 ಮತಗಳು ಬಂದವು. ಪ್ರತಿಸ್ಪರ್ಧಿ ಗಳಾದ ಕಾಂಗ್ರೆಸ್ ಬೆಂಬಲಿತ ಮಾರುತಿ ಗಡಾದ್, ನಿಂಬೆಮ್ಮ ಕತ್ತಿ ಅವರಿಗೆ ಪ್ರತ್ಯೇಕವಾಗಿ ತಲಾ 10 ಮತಗಳು ಬಂದವು. ಅಂತಿಮವಾಗಿ ಮಹಾಂತೇಶ ಹಡಪದ ಹಾಗೂ ಶಾಂತಮ್ಮ ಜಾಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆಂದು ಚುನಾವಣಾಧಿಕಾರಿ ಎಂ.ಸಿದ್ದೇಶ ಘೋಷಿಸಿದರು.
ಈ ಚುನಾವಣೆಯಲ್ಲಿ ನೂತನ ಚಳಗೇರಾ ಗ್ರಾ.ಪಂ. ಅಧ್ಯಕ್ಷ ಮಹಾಂತೇಶ ಹಡಪದ ಮೂಲತಃ ಕ್ಷೌರಿಕ ವೃತ್ತಿಯಲ್ಲಿದ್ದು, ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾ.ಪಂ. ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ದಿಸಿ ಗೆದ್ದಿದ್ದ ಮಹಾಂತೇಶ ಹಡಪದ ಗೃಹರಕ್ಷಕ ಸಿಬ್ಬಂದಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.ಗ್ರಾ.ಪಂ. ಸದಸ್ಯನಾಗಿದ್ದರು ಕುಷ್ಟಗಿ ಯ ಕನಕದಾಸ ಸರ್ಕಲ್ ನಲ್ಲಿ ಹೇರ ಡ್ರೆಸೆಸ್ ಮುಂದುವರಿಸಿದ್ದರು. ಇದೀಗ ಚಳಗೇರಾ ಗ್ರಾ.ಪಂ. ನೂತನ ಅಧ್ಯಕ್ಷರಾಗಿದ್ದಾರೆ.
ಈ ಚುನಾವಣಾ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳೀಕೇರಿ, ಜವಳಿ, ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಮುತ್ತು ರಾಠೋಡ್, ವಿಜಯಕುಮಾರ ಹಿರೇಮಠ, ದೊಡ್ಡಬಸವ ಸುಂಕದ್ ವಿಜಯೋತ್ಸವ ಸಂಭ್ರಮದಲ್ಲಿ ಸಾಕ್ಷಿಯಾದರು.