Advertisement

Kushtagi; ಪಾಕಿಸ್ಥಾನ ಧ್ವಜ ಸ್ಟೇಟಸ್ ಹಾಕಿಕೊಂಡ ಯುವಕ ಪೊಲೀಸರ ವಶಕ್ಕೆ

09:37 PM Nov 24, 2023 | Team Udayavani |

ಕುಷ್ಟಗಿ : ಪಾಕಿಸ್ಥಾನ ಧ್ವಜವನ್ನು ಮೊಬೈಲ್ ಸ್ಟೇಟಸ್ ಹಾಕಿಕೊಂಡ ಯುವಕನನ್ನು ದೇಶದ್ರೋಹ ಆರೋಪದ ಮೇರೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪಂಚರ್ ಶಾಪ್ ನ ರಾಜೇಸಾಬ್‌ ಮಹ್ಮದ್ ಸಾಬ್ ನಾಯಕ ಎಂಬ ಯುವಕ‌ ತನ್ನ ಮೊಬೈಲ್ ನಲ್ಲಿ ಪಾಕ್ ಧ್ವಜದ ಸ್ಟೇಟಸ್ ಹಾಕಿಕೊಂಡಿದ್ದ. ಅಲ್ಲದೇ ಶುಕ್ರವಾರ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಪಾಕಿಸ್ಥಾನ ಬಾಂಧವರಿಗೆ ಸ್ವಾಗತ ಕೋರಿದ್ದ.

ಈ ಬೆಳವಣಿಗೆಯನ್ನೂ ಹಿಂದೂ ಸಂಘಟನೆಯ ಕಾರ್ಯಕರ್ತ ಗುಡಸಲಿ ಅವರು ಖಂಡಿಸಿ ಸ್ಥಳೀಯ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿ ದೇಶದ್ರೋಹದ ಆರೋಪದ ಮೇರೆಗೆ ಬಂಧಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ ಅವರು, ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಾವರಗೇರಾ ಪೊಲೀಸ್ ಠಾಣೆಯೆಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next