ಕುಷ್ಟಗಿ:ತಾಲೂಕಿನ ಜೆ.ರಾಂಪೂರ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ದುರ್ಮರಣಕ್ಕೀಡಾದ ಘಟನೆ ಗುರುವಾರ ಸಂಜೆ ನಡೆದಿದೆ. ರತ್ಮಮ್ಮ ದೊಡ್ಡಪ್ಪ ಓತಗೇರಿ (42) ಮೃತ ದುರ್ದೈವಿ.
ರತ್ಮಮ್ಮ ತನ್ನ ಅಕ್ಕ ದೇವಮ್ಮ ಅವರೊಂದಿಗೆ ಜಮೀನಿನ ದೇವರಿಗೆ ಕಾಯಿ ಒಡೆಯಲೆಂದು ಹೋಗಿದ್ದು, ಪೂಜೆ ಸಲ್ಲಿಸಿದ ಬಳಿಕ ದೇವಮ್ಮ ಮಳೆ ಮುನ್ಸೂಚನೆಯಿಂದ ಬೇಗನೆ ಮನೆಗೆ ಬಂದಿದ್ದರು.
ರತ್ನಮ್ಮ ಜಮೀನಿನಲ್ಲೇ ಉಳಿದಿದ್ದು ಮಳೆಯಿಂದ ರಕ್ಷಣೆಗೆಂದು ಮರವೊಂದರ ಬುಡದಲ್ಲಿ ನಿಂತಿದ್ದಾಗ ಸಿಡಿಲೆರಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅಕಾಲಿಕ ಸಾವಿನಿಂದ ಕುಟುಂಬ ವರ್ಗ ಕಂಗಾಲಾಗಿದೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ದೌಡಾಯಿಸಿದ್ದು, ತಾವರಗೇರಾ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಆರಂಭಿಕ ಮುಂಗಾರು ಸಂದರ್ಭದಲ್ಲಿ ಇದು ಮೂರನೇ ಪ್ರಕರಣ ಇದಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ರವಿ ಅಂಗಡಿ ಭೇಟಿ ನೀಡಿ ಮೃತಳ ಕುಟುಂಬಕ್ಕೆ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಲ್ಲಿ 5 ಲಕ್ಷ ರೂ. ಪರಿಹಾರದ ಚಕ್ ಹಸ್ತಾಂತರಿಸಿದರು. ತಾವರಗೇರಾ ಪಿಎಸೈ ಸುಜತಾ ನಾಯಕ ಸೇರಿದಂತೆ ಕಂದಾಯ ಅಧಿಕಾರಿಗಳು ಇದ್ದರು.