Advertisement

ಕುಷ್ಟಗಿ: ಸೈನಿಕನ ಮೇಲೆ ಹಲ್ಲೆ; ಮಾಜಿ ಸೈನಿಕರಿಂದ ಖಂಡನೆ

03:37 PM Mar 03, 2022 | Team Udayavani |

ಕುಷ್ಟಗಿ: ಲಿಂಗಸುಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಸೈನಿಕ ಅಮರೇಶ ಮೇಲೆ ಹಲ್ಲೆ ಖಂಡಿಸಿ ಕುಷ್ಟಗಿಯ ಮಾಜಿ ಸೈನಿಕರು ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ‌ ಗುರುವಾರ  ಮನವಿ ಸಲ್ಲಿಸಿದರು.

Advertisement

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಹಂಪನಗೌಡ ಬಳೂಟಗಿ ನೇತೃತ್ವದಲ್ಲಿ ಮಾಜಿ ಸೈನಿಕರು ಮನವಿ ಸಲ್ಲಿಸಿ ಬಿಎಸ್ಎಫ್ ಸೇವೆಯಲ್ಲಿರುವ ಸೈನಿಕ‌ ಅಮರೇಶ ಮೇಲೆ ಹಲ್ಲೆ ಮಾಡಿದ ರಾಜಕೀಯ ಪ್ರಭಾವಿಯನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಸೈನಿಕನ ತಾಯಿಯ ಕೊಲೆಯಾಗಿದ್ದು, ಸೈನಿಕ ಅಮರೇಶ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಭೀಮಪ್ಪ ವಗ್ಗರ್, ಸುರೇಶ ಜೆ, ಮಹ್ಮದ ರಫಿ,ವಿಜಯಕುಮಾರ ‌ನಾಡಗೌಡರ,ಶರಣಯ್ಯ ಹಿರೇಮಠ, ಅಶೋಕ ಚಿಕ್ಕಮನಿ, ವೀರೇಶ ಹುನಗುಂದ, ಎಸ್.ಎಸ್.ನಂದಾಪೂರ, ಶಿವಸಂಗಪ್ಪ, ಬುಡ್ಡಪ್ಪ ಹಿರೇಮನಿ,ಎ.ಆರ್.ಬಸಪ್ಪ, ಶಿವಾಜಿ ಹಡಪದ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next