Advertisement

ಕುಷ್ಟಗಿ: ಯೋಗ ಹೇಳಿಕೊಡುವ “ರಾಜಸ್ಥಾನ ವ್ಯಾಪಾರಿ’

05:36 PM Jun 21, 2023 | Team Udayavani |

ಕುಷ್ಟಗಿ: ರಾಜಸ್ಥಾನದಿಂದ ಜೀವನೋಪಾಯಕ್ಕಾಗಿ ಕುಷ್ಟಗಿಗೆ ಬಂದ ವ್ಯಾಪಾರಿಯೊಬ್ಬರು ಪತಂಜಲಿ ಯೋಗ ಶಿಬಿರದಲ್ಲಿ ಯೋಗ ಕಲಿತು, ಯೋಗ ಸಾಧಕರೆನಿಸಿ ಈಗ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ.

Advertisement

ಮೂಲತಃ ರಾಜಸ್ಥಾನ ರಾಜ್ಯದ ಬಾರಮೇರ್‌ ಜಿಲ್ಲೆಯ ಬಾಡ್ಗಾ ಗ್ರಾಮದವರು, ಸದ್ಯ ಕುಷ್ಟಗಿಯಲ್ಲಿ ಬಟ್ಟೆ ವ್ಯಾಪಾರಿಯಾಗಿರುವ
ಅಸ್ಲಾರಾಮ್‌ 2012 ರಲ್ಲಿ ಬುತ್ತಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಪತಂಜಲಿ ಯೋಗ ಸಮಿತಿ ಶಿಬಿರದಲ್ಲಿ
ಶಿಬಿರಾರ್ಥಿಯಾಗಿ ಭಾಗವಹಿಸಿದ್ದರು. ಅಂದಿನಿಂದ ಪ್ರತಿದಿನ ಚಾಚೂ ತಪ್ಪದೇ ಯೋಗಾಸನ ಮಾಡುತ್ತಿದ್ದಾರೆ.

2015ರಿಂದ ಯೋಗ ಶಿಕ್ಷಕರಾಗಿರುವ ಇವರು ಹಲವು ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಒಂದು ವೇಳೆ ಶಿಬಿರಾರ್ಥಿಗಳು
ಬಾರದೇ ಇದ್ದರೂ ತಾವೊಬ್ಬರೇ ಯೋಗಾಸನ ಮಾಡುತ್ತಾರೆ. ತಮ್ಮ ಬಟ್ಟೆ ಅಂಗಡಿ ಗ್ರಾಹಕರಿಗೂ ಯೋಗದ ಬಗ್ಗೆ ಹೇಳುತ್ತಾರೆ.

ಬಾಬಾ ರಾಮದೇವ ಅವರ ಯೋಗವಿದ್ಯೆಯಿಂದ ಪ್ರಭಾವಿತರಾಗಿರುವ ಅಸ್ಲಾಂ ರಾಮ್‌ ಅವರು, ಹರಿದ್ವಾರಕ್ಕೆ ಬಾಬಾ
ರಾಮ್‌ದೇವ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಬಳ್ಳಾರಿ, ಹೊಸಪೇಟೆ, ವಿಜಯಪುರದಲ್ಲಿ ಅವರ ಯೋಗ ಸಾಧನೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ರಾಜಸ್ಥಾನಿ ಆಗಿರುವುದರಿಂದ ಆರಂಭದಲ್ಲಿ ಕನ್ನಡ ಭಾಷೆ ಸಮಸ್ಯೆಯಾಗಿತ್ತು. ಯೋಗಾಸನ ಶಿಬಿರದಲ್ಲಿ ಹಾಗೂ ಬಟ್ಟೆ ಅಂಗಡಿಯಲ್ಲಿ ಕನ್ನಡ ಭಾಷೆ ಕಲಿತಿರುವೆ. ಮಕ್ಕಳು ಸಹ ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ವೀರೇಶ ಬಂಗಾರಶೆಟ್ಟರ್‌ ಅವರು ಆಯೋಜಿಸಿದ್ದ ಯೋಗಾಸನ ಶಿಬಿರದಲ್ಲಿ ಅವಕಾಶ ಕಲ್ಪಿಸಿದ್ದರಿಂದ ಈ ಮಟ್ಟದ ಬೆಳವಣಿಗೆ ಸಾಧ್ಯವಾಯಿತು ಎನ್ನುತ್ತಾರೆ ಯೋಗ ಸಾಧಕ ಅಸ್ಲಾರಾಮ್‌.

Advertisement

*ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next