Advertisement

ಕುಶಾಲನಗರ: ಬುಲೆಟ್‌-ಸ್ಕೂಟಿ ಅಪಘಾತ; ವಿದ್ಯಾರ್ಥಿನಿ ಸಾವು

11:16 PM Jun 17, 2023 | Team Udayavani |

ಮಡಿಕೇರಿ: ಎರಡು ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.

Advertisement

ಪಟ್ಟಣದ ಇಂದಿರಾ ಬಡಾವಣೆ ನಿವಾಸಿ ಪೂಣಚ್ಚ ಅವರ ಪುತ್ರಿ ಭಾವನಾ (21) ಮೃತ ಯುವತಿ. ಗುರುವಾರ ಸಂಜೆ ಕುಶಾಲನಗರದ ಕೂರ್ಗ್‌ ಸಿನಿಪ್ಲೆಕ್ಸ್‌ ಬಳಿ ಬುಲೆಟ್‌ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟಿಯಲ್ಲಿದ್ದ ಭಾವನಾ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಜತೆಯಲ್ಲಿದ್ದ ಕೊಪ್ಪದ ಬಳಿಯ ಮರೂರು ನಿವಾಸಿ, ವಿದ್ಯಾರ್ಥಿನಿ ನಿಸರ್ಗ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾವನಾ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕುಶಾಲನಗರಕ್ಕೆ ಬಂದಿದ್ದ ಈಕೆ ಸ್ನೇಹಿತೆ ನಿಸರ್ಗಳೊಂದಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಬುಲೆಟ್‌ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಕುಶಾಲನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next