Advertisement

ಬಂಟ್ವಾಳದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ

11:52 PM Apr 12, 2019 | mahesh |

ಬಂಟ್ವಾಳ: ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್‌ ಮತ್ತು ಅಭಿರುಚಿ ಜೋಡುಮಾರ್ಗ ಆಶ್ರಯದಲ್ಲಿ ಜೋಡು ಮಾರ್ಗ ಸ್ಪರ್ಶ ಕಲಾ ಮಂದಿರದಲ್ಲಿ ಎ. 5ರಂದು ರಾತ್ರಿ ಆಯೋಜಿಸಲಾದ ಹೆಗ್ಗೊಡಿನ ಸತ್ಯಶೋಧನ ರಂಗ ಸಮು ದಾಯ ಅರ್ಪಿಸಿದ ಜನುಮದಾಟ ಅಭಿ ನಯದ ಪೌರಾಣಿಕ, ಸಂಗೀತಮಯ ನಾಟಕ “ಕುರುಕ್ಷೇತ್ರ’ಕ್ಕೆ ಹಿರಿಯ ರಂಗ ಕರ್ಮಿ ಅಭಿರುಚಿ ಜೋಡುಮಾರ್ಗದ ಮಹಾಬಲೇಶ್ವರ ಹೆಬ್ಟಾರ್‌ ಚಾಲನೆ ನೀಡಿದರು.

Advertisement

ಡಾ| ಎಂ. ಗಣೇಶ್‌ ಹೆಗ್ಗೋಡು ಪರಿಕಲ್ಪನೆ ಮತ್ತು ನಿರ್ದೇಶನದ ಈ ನಾಟಕವನ್ನು ನುರಿತ ಕಲಾವಿದರನ್ನು ಒಳಗೊಂಡ ಯುವಕರ ತಂಡ ದಶಕಗಳ ಹಿಂದಿನ ಕಂಪೆನಿ ನಾಟಕಗಳಲ್ಲಿರುವ ಪರಿಕರಗಳನ್ನು ಬಳಸಿ ಅಭಿನಯಿಸಿ ಗಮನ ಸೆಳೆದರು.

ಮನಸ್ಸು ತಟ್ಟಿದ ಮನಸ್ಸಿನ ಪಲ್ಲಟಗಳು
ಕುರುಕ್ಷೇತ್ರ ಯುದ್ಧದ ಪೂರ್ವಭಾವಿ ಸನ್ನಿವೇಶಗಳು ಹಾಗೂ ದ್ರೋಣ, ಅಭಿಮನ್ಯುವಿನ ಅವಸಾನ, ಗದಾಯುದ್ಧದ ಸನ್ನಿವೇಶಗಳನ್ನು ಕಲಾವಿದರು ಕಟ್ಟಿಕೊಟ್ಟರು. ದಾಯಾದಿ ಕಲಹ, ಅಸೂಯೆ, ಮತ್ಸರ, ಸೇಡು ಮೊದಲಾದ ಮನಸ್ಸಿನ ಪಲ್ಲಟಗಳು, ನೋವು, ಕುತಂತ್ರ, ಕುಂತಿ, ಗಾಂಧಾರಿಯ ಪುತ್ರ ವ್ಯಾಮೋಹದಂಥ ಸನ್ನಿವೇಶಗಳು ಇಂದಿಗೂ ಪ್ರಸ್ತುತ ಎಂಬ ಭಾವನೆ ಮೂಡಿಸಿದವು.

ನಾಟಕ ಪ್ರದರ್ಶನದ ಬಳಿಕ ಕಲಾವಿದ ಮಂಜು ಸಿರಿಗೇರಿ ನಾಟಕದ ಕುರಿತು ಮಾಹಿತಿ ನೀಡಿದರು. ನ್ಯಾಯವಾದಿ ಅಜಿತ್‌ ಕುಮಾರ್‌ ಅಡೂxರು ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯ ರಂಗಕರ್ಮಿ ಅಭಿರುಚಿ ಜೋಡುಮಾರ್ಗದ ಸುಂದರ ರಾವ್‌, ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್‌ ಅಧ್ಯಕ್ಷ ಕಜೆ ರಾಮಚಂದ್ರ ಭಟ್‌, ಕಸಾಪ ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್‌ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next