Advertisement

ಕುರುಗೋಡು: ರೈತರಿಗೆ ತರಬೇತಿ ಕಾರ್ಯಕ್ರಮ

12:54 PM Nov 21, 2021 | Team Udayavani |

ಕುರುಗೋಡು: ಎಮ್ಮಿಗನೂರು ಗ್ರಾಮದಲ್ಲಿ ಶ್ರೀ ಪ್ಯಾಟೆ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಜರುಗಿತು.

Advertisement

ಕಾರ್ಯಕ್ರಮದಲ್ಲಿ ಕೀಟಶಾಸ್ತ್ರ ತಜ್ಞ ಬದರಿಪ್ರಸಾದ್‌ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರು ಕೃಷಿ ಚಟುವಟಿಕೆಯಿಂದ ವಿಮುಖವಾಗುತ್ತಿದ್ದಾರೆ. ಹೊಲದಲ್ಲಿ ಒಂದೇ ಬೆಳೆ ಬೆಳೆಯುವ ಬದಲು ಸಾವಯವ ಕೃಷಿ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಮೌಲ್ಯವರ್ಧಿತ ಬೆಳೆಗಳನ್ನು ಬೆಳೆಯಬೇಕೆಂದು ರಾಜ್ಯದ ಇತರೆ ಭಾಗದಲ್ಲಿ ಪ್ರಗತಿಪರ ರೈತರ ನಿದರ್ಶಗಳನ್ನು ನೀಡಿದರು.

ಸಸ್ಯ ರೋಗ ತಜ್ಞ ಪ್ರಮೇಶ ಮಾತನಾಡಿ, ಕೃಷಿಯಲ್ಲಿ ರೈತರು ತಮ್ಮನ್ನು ತಾವು ತೊಡಗಿಸಿಕೊಂಡು ಬೆಳೆಗಳಿಗೆ ಬಂದ ರೋಗಗಳಿಗೆ ಯಾವ ಸಮಯ, ಎಷ್ಟೆ ಪ್ರಮಾಣದಲ್ಲಿ ಔಷಧಗಳು ಸಿಂಪಡಿಸಬೇಕು ಹಾಗೂ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಅಧಿಕಾರಿ ಶ್ರೀಧರ ಮಾತನಾಡಿ, ಸರಕಾರ ಹಾಗೂ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯ ಕುರಿತು ಮಾಹಿತಿ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಮಿಥುನ್‌ ಕಿಮಾವತ್‌, ಎಡಿಎ ವಿದ್ಯಾವತಿ ಕೃಷಿ ಅಧಿಕಾರಿಗಳಾದ ಆಶೋಕ ಮಡಿವಾಳ, ಯಲ್ಲಪ್ಪ ಬನ್ನಿಕೊಪ್ಪ, ಗಿರಿಜಾ ಅಂಗಡಿ, ಡಿ. ಶಿವಪ್ಪ, ತಾಲೂಕು ತಾಂತ್ರಿಕ ಸಹಾಯಕ ವ್ಯವಸ್ಥಾಪಕ ಎಚ್‌. ಪರಮೇಶ್ವರ ನಾಯಕ್‌, ತಾಂತ್ರಿಕ ಸಹಾಯಕ ರೇಣುಕಾರಾಜು, ರೈತ ಅನುಗಾರ ಬಸಯ್ಯ ಸ್ವಾಮಿ, ಮುಖಂಡರಾದ ಕುರುಬರ ತಿಪ್ಪಯ್ಯ, ಕರಿಬಸಯ್ಯ, ಹೊಸಗುರು ಜಡೇಪ್ಪ, ಬುರಡ್ಡಿ ಸಣ್ಣ ಜಡೇಪ್ಪ, ಸತ್ಯಣª, ಎಸ್‌. ಜಡೆಪ್ಪ, ಅಡಿವಯ್ಯ ಕೆ.ಎಂ. ಕಾರ್ಯಕ್ರಮ ಶಿವನೇಗೌಡ್ರ ರಾಮು ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next