ಕುರುಗೋಡು : ಕಳೆದ ದಿನಗಳ ಹಿಂದೆ ಕುರುಗೋಡು ತಾಲೂಕು ಬಾದನಹಟ್ಟಿ ಗ್ರಾಮ ಮತ್ತು ವದ್ದಟ್ಟಿ ಗ್ರಾಮದಲ್ಲಿ ಮನೆ ಬೀಗ ಮುರಿದು ಹಣ ಹಾಗೂ ಒಡೆವಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬಳ್ಳಾರಿಯ ಶ್ರೀಕಾಂತ್ (26) ವರ್ಷ, ಬಾದನಹಟ್ಟಿಯ ರೇಣುಕಪ್ಪ ( 24) ವರ್ಷ, ವದ್ದಟ್ಟಿ ಗ್ರಾಮದ ಗಾದೆಪ್ಪ (33) ವರ್ಷ ಎನ್ನಲಾಗಿದೆ.
ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದಲ್ಲಿ ಮಾರ್ಚ್ 30 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ 7,63,000 ಬೆಲೆಯ ಸುಮಾರು 21 ತೊಲೆ 2 ಗ್ರಾಮ ಬಂಗಾರದ ಆಭರಣ ಮತ್ತು 10,500 ನಗದು ಹಣವನ್ನು ದೋಚಿರುತ್ತಾರೆ. ಅದಲ್ಲದೆ ಬಾದನಹಟ್ಟಿ ಗ್ರಾಮದಲ್ಲಿ ಜುಲೈ 12 ರಂದು ಮನೆ ಬೀಗ ಮುರಿದು 4,37,500 ಬೆಲೆಯ ಸುಮಾರು 12/2 ತೊಲೆಯ ತೂಕದ ಆಭರಣಗಳು ಹಾಗೂ 1,50,000 ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು ಎಂದು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಪ್ರಕರಣವನ್ನು ಕೈಗೆತ್ತಿಕೊಂಡ ಕುರುಗೋಡು ಪೊಲೀಸರು ಜಿಲ್ಲಾ ವರಿಷ್ಟಧಿಕಾರಿ ಸೈದುಲ್ಲಾ ಅದಾವತ್, ಆಡಿಷನಲ್ ಎಸ್ಪಿ ಲಾವಣ್ಯ,ಡಿ, ವೈ, ಎಸ್ಪಿ, ಸತ್ಯನಾರಾಯಣ ಅವರ ನೇತೃತ್ವದಲ್ಲಿ ಆರೋಪಿ ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ :ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕುರುಗೋಡು ಸಿಪಿಐ ಚಂದನ್ ಗೋಪಾಲ್, ಕುಡುತಿನಿ ಪಿ ಎಸ್ ಐ ಸುರೇಶ, ಕುರುಗೋಡು ಪಿ ಎಸ್ ಐ ಮೌನೇಶ್ ರಾಥೋಡ್ ಹಾಗೂ ಕುರುಗೋಡು ಪ್ರೊಪೆಸರ್ ಪಿ ಎಸ್ ಐ ಶಾಂತಮೂರ್ತಿ ಹೆಚ್ ಸಿ ಗಳಾದ ಕರಿಬಸಪ್ಪ,ಪರಮೇಶ್ವರ ನಾಯ್ಕ, ಶರಣಪ್ಪ, ಎಪಿಸಿ ರೇವಣ್ಣ,ಮತ್ತು ಕೌಲ್ ಬಜಾರ್ ಠಾಣೆಯ ಹೆಚ್ ಸಿ ನಾಗರಾಜ್, ಅನ್ವರ್ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ್ದಾರೆ.