ಕುರುಗೋಡು: ಪಟ್ಟಣದ ನೂತನ ತಹಶೀಲ್ದಾರ್ ಆಗಿ ಗುರುರಾಜ್, ಎಂ. ಛಲವಾದಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ರಾಘವೇಂದ್ರ ಅವರು ತೆರವಾದ ಸ್ಥಾನಕ್ಕೆ ಭರ್ತಿ ಹೊಂದಿದ್ದಾರೆ. ಗುರುರಾಜ್ ಛಲವಾದಿ ಅವರು ಇಲ್ಲಿಗೆ ಬರುವ ಮುನ್ನ ಕುಷ್ಟಗಿ ತಾಲೂಕಿನ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇಲ್ಲಿ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತಿದ್ದ ರಾಘವೇಂದ್ರ ಅವರು ಕುಷ್ಟಗಿ ತಾಲೂಕಿಗೆ ವರ್ಗಾವಣೆಗೊಂಡಿದ್ದಾರೆ.
ನೂತನ ತಹಶೀಲ್ದಾರ್ ಗುರುರಾಜ್ ಛಲವಾದಿ ಅವರಿಗೆ ಪಟ್ಟಣದ ಮುಖಂಡರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಹೂವಿನ ಹಾರ ಹಾಕಿ ಅಭಿನಂದಿಸಿದ್ದಾರೆ.
ಇದೆ ವೇಳೆ ನೂತನ ತಹಶೀಲ್ದಾರ್ ಮಾತನಾಡಿ, ಪಟ್ಟಣಕ್ಕೆ ಹೊಸ ಅಧಿಕಾರಿಯಾಗಿರುವುದರಿಂದ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಈ ಹಿಂದೆ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಯಾವ ರೀತಿ ಸಹಕಾರ ನೀಡಿದ್ದಿರೋ ಅದೇ ರೀತಿ ಸಹಕಾರ ನೀಡಿ ಎಂದು ವಿನಂತಿಸಿದರು.
ಇದನ್ನೂ ಓದಿ: ತಾಕತ್ತಿದ್ದರೆ ನಾನು ಹೇಳಿದ ವ್ಯಕ್ತಿಯನ್ನೇ ಸಿಎಂ ಅಭ್ಯರ್ಥಿಯೆಂದು ಘೋಷಿಸಿ: ಹೆಚ್ ಡಿಕೆ ಸವಾಲು