ಕುರುಗೋಡು: ಹಿಂಗಾರು ಮಳೆಯಿಲ್ಲದೆ ಬಿತ್ತನೆಯಿಂದ ದೂರ ಉಳಿದಿದ್ದ ರೈತನಿಗೆ ಮುಂಗಾರು ಮತ್ತೂಮ್ಮೆ ನಿರಾಶೆ ಮೂಡಿಸಿ ಚಿಂತೆಗೀಡುಮಾಡಿದೆ.
Advertisement
ಈಗಾಗಲೇ ಪಟ್ಟಣದ ಸುತ್ತಮುತ್ತ ಗ್ರಾಮಗಳಲ್ಲಿ ಉತ್ತಮ ಮಳೆ ಕಾಣದ ರೈತರು ದೇವರುಗಳಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಇತರೆ ಧಾರ್ಮಿಕ ಪೂಜೆ ಮಾಡುತ್ತಾ ಭಗವಂತನಲ್ಲಿ ಪ್ರಾರ್ಥಿಸುವ ಸನ್ನಿವೇಶ ನಿರ್ಮಾಣವಾಗಿದೆ.
Related Articles
Advertisement
ಮಾರಾಟವಾದ ಬೀಜಗಳು: ಮುಂಗಾರು ಹಂಗಾಮಿನಲ್ಲಿ ರೈತರಿಗೆ ತೊಂದರೆಯಾಗದಂತೆ ಕುರುಗೋಡು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು ಭತ್ತ 380 ಕ್ವಿಂಟಲ್, ಮೆಕ್ಕೆಜೋಳ 1 ಕ್ವಿಂಟಲ್ 20 ಕೆಜಿ, ನವಣಿ 50 ಕೆಜಿ, ತೊಗರಿ 3 ಕ್ವಿಂಟಲ್, ಸೂರ್ಯಕಾಂತಿ 1 ಕ್ವಿಂಟಲ್ 10 ಕೆಜಿ ಬಿತ್ತನೆ ಬೀಜ ವಿತರಿಸಲಾಗಿದೆ. ಇನ್ನೂ ಬಿತ್ತನೆ ಬೀಜ ದಾಸ್ತಾನಿದ್ದು ಯಾವುದೇ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗಿದೆ.
ಮಳೆಯ ಪ್ರಮಾಣ ಕುಸಿದಿದ್ದರಿಂದ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜುಲೈ ಮತ್ತು ಆಗಸ್ಟ್ ನಲ್ಲಿ ಭತ್ತ ಬಿತ್ತನೆ ಆರಂಭವಾಗಬೇಕಿತ್ತು. ಅಲ್ಲಲ್ಲಿ ಅಲ್ಪ ಮಳೆಯಾದ ಹಿನ್ನೆಲೆ ಮೆಕ್ಕೆಜೋಳ ಉತ್ತಮ ರೀತಿಯಲ್ಲಿ ಬಿತ್ತನೆಯಾಗಿದೆ. ಶೀಘ್ರವೇ ಉತ್ತಮ ಮಳೆಯಾದರೆ ಇನ್ನೂ ಅನುಕೂಲ.•ದೇವರಾಜ,
ಕೃಷಿ ಅಧಿಕಾರಿ, ಕುರುಗೋಡು ನದಿ ದಂಡೆಯ ರೈತರು ಈಗಾಗಲೇ ಭತ್ತ ನಾಟಿ ಮಾಡಬೇಕಿತ್ತು. ಮಳೆರಾಯ ಕೈಕೊಟ್ಟ ಪರಿಣಾಮ ಮುಂಗಾರು ಬೆಳೆಗೆ ಮುಂದಾಗಿಲ್ಲ. ಅದರಲ್ಲಿ ನದಿಯಲ್ಲಿ ನೀರು ಇಲ್ಲದೆ ಖಾಲಿ ಅಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬರುತ್ತೆ ಎಂದು ತಿಳಿದು ಭತ್ತ ನಾಟಿ ಮಾಡಲು ಸಸಿ ಮಡಿಗಳನ್ನು ಹಾಕಿದ್ದು ಅದಕ್ಕೂ ನೀರಿಲ್ಲದೆ ಒಣಗಿ ಹೋಗಿದೆ. ಆದರೂ ಪ್ರತಿ ವರ್ಷ ರೈತರು ಸಮಸ್ಯೆಗೆ ಸಿಲುಕಬೇಕಾಗಿದೆ.
•ಮಂಜುನಾಥ,
ನದಿ ದಂಡೆಯ ಪ್ರಗತಿ ಪರ ರೈತ