Advertisement
ಈಗಾಗಲೇ ಕುಡತಿನಿ ಪಟ್ಟಣದಲ್ಲಿ 6 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು. ಅವುಗಳಲ್ಲಿ ಕೆಲವೊಂದು ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಪಟ್ಟಣದ ಸಾರ್ವಜನಿಕರೆಲ್ಲ ದ್ಯಾವಮ್ಮ ಮತ್ತು ದುರುಗಮ್ಮ ದೇವಸ್ಥಾನದ ಪಕ್ಕದಲ್ಲಿರುವ ಘಟಕಕ್ಕೆ ಸೈಕಲ್ ಬಂಡಿ ಹಾಗೂ ಬೈಕ್ ಇತರೆ ವಾಹನಗಳ ಮೂಲಕ ತೆರಳಿ ಗಂಟೆಗಟ್ಟಲೇ ಕಾಯ್ದು ನೀರು ಹಿಡಿಯಬೇಕಾಗಿದೆ. ಒಂದು ವೇಳೆ ಪಟ್ಟಣದಲ್ಲಿರುವ ಘಟಕಗಳು ಕೈ ಕೊಟ್ಟರೆ ಅಕ್ಕಪಕ್ಕದ ರೈತರ ಪಂಪ್‌ಸೆಂಟ್‌ಗಳಿಗೆ ತೆರಳಿ ನೀರು ತರಬೇಕಾಗಿದೆ. ಸದ್ಯ ಬರಗಾಲ ಪರಿಸ್ಥಿತಿ ಇದ್ದು ಮಹಿಳೆಯರು ಕೂಲಿ ಕೆಲಸ ತ್ಯಜಿಸಿ ನೀರು ಸಂಗ್ರಹಿಸಬೇಕಾಗಿದೆ. ವಿದ್ಯಾರ್ಥಿಗಳು ಕೂಡ ಟ್ಯೂಷನ್ ಹಾಗೂ ಬೇಸಿಗೆ ಶಿಬಿರಗಳಿಗೆ ಹೋಗದೆ ತಂದೆ-ತಾಯಿಗಳ ಜತೆಗೆ ನೀರು ಹಿಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.
Related Articles
Advertisement
ಕುಡತಿನಿ ಪಟ್ಟಣದಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೇ ಪಪಂ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಸರಕಾರ ನಿಗದಿಪಡಿಸಿರುವ ಹಣಕ್ಕಿಂತ ಹೆಚ್ಚಿನ ಹಣ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು. ಕೂಡಲೇ ಟೆಂಡರ್ ಕರೆದು ಸಮರ್ಪಕ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು.•ಟಿ.ಕೆ.ಕಾಮೇಶ,
ವಕೀಲರು, ಕುಡತಿನಿ. ನೀರು ಶುದ್ಧೀಕರಣ ಘಟಕಕ್ಕೆ ಪಪಂನಿಂದ ಟೆಂಡರ್ ಆಗಿದೆಯೋ ಇಲ್ಲ ಗೊತ್ತಿಲ್ಲ. ನಾನು ಪಪಂಗೆ ಹೊಸಬ ನಾನು ಚುನಾವಣೆ ನಿಮಿತ್ತ ಬಂದಿದ್ದೇನೆ. ಎರಡು, ಮೂರು ದಿನಗಳ ಹಿಂದೆ ಒಂದು ಸಮಸ್ಯೆ ಅಗಿತ್ತು. ಸಮಸ್ಯೆಗಳು ಅಗದಂತೆ ನಿಗಾವಹಿಸಿ ಜನರಿಗೆ ನೀರು ಕೊಡುವ ಕಾರ್ಯ ಮಾಡುತ್ತೇವೆ.
•ಅರುಣ್ ನಾಯ್ಕ,
ಪಪಂ ಮುಖ್ಯಾಧಿಕಾರಿ ಕುಡತಿನಿ.