Advertisement

ನೀರಿನ ಘಟಕ ನನೆಗುದಿಗೆ-ಪರದಾಟ

12:20 PM Apr 24, 2020 | Naveen |

ಕುರುಗೋಡು: ಕುಡುತಿನಿಯ 6 ಮತ್ತು 19ನೇ ವಾರ್ಡಿನಲ್ಲಿ ಸಮರ್ಪಕವಾಗಿ ನೀರು ದೊರಕದೆ ಅಲ್ಲಿನ ಜನರು ಹೈರಾಣಾಗಿದ್ದಾರೆ. ನಿತ್ಯ ಬೇರೆ ಬೇರೆ ವಾರ್ಡಿಗೆ ಅಥವಾ ಖಾಸಗಿ ಶುದ್ಧ ನೀರಿನ ಘಟಕಗಳಿಗೆ ತೆರಳಿ ಹಣ ಕೊಟ್ಟು ನೀರು ಖರೀದಿ ಮಾಡಬೇಕಾದ ಪರಿಸ್ಥಿತಿ ಇದೆ.

Advertisement

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ವಿಧಿಸಲಾಗಿದ್ದು 6 ಮತ್ತು 19ನೇ ವಾರ್ಡಿನ ಜನರಿಗೆ ನೀರು ತರುವುದೇ ಕಷ್ಟಕರವಾಗುತ್ತಿದೆ. 3 ವರ್ಷಗಳ ಹಿಂದೆ ಎನ್‌ ಎಂಡಿಸಿ ಮತ್ತು ಪಪಂ ವತಿಯಿಂದ 6 ಮತ್ತು 19ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು. 6ನೇ ವಾರ್ಡಿನಲ್ಲಿರುವ ಘಟಕ ಕೆಲ ದಿನ ಕಾರ್ಯನಿರ್ವಹಿಸಿ ನಂತರ ನನೆಗುದಿಗೆ ಬಿದ್ದಿದೆ. 19ನೇ ವಾರ್ಡಿನ ಘಟಕ ನಿರುಪಯುಕ್ತಗೊಂಡಿದೆ. ಈ ಎರಡು ವಾರ್ಡ್‌ಗಳಿಗೆ ಸದ್ಯ ನೀರು ಸಿಗದಿದ್ದರಿಂದ ಜನರು ನಿತ್ಯ ಪರದಾಡುತ್ತಿದ್ದಾರೆ.

6 ಮತ್ತು 19ನೇ ವಾರ್ಡಿನಲ್ಲಿ ಸಮರ್ಪಕವಾಗಿ ನೀರು ಇಲ್ಲದೆ ಜನ ನಿತ್ಯ ಪರದಾಡುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಒದಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ.
ಟಿ.ಕೆ. ಕಾಮೇಶ, ಮುಖಂಡ

ಮೋಟಾರ್‌ ಸಮಸ್ಯೆಯಿಂದ 6ನೇ ವಾರ್ಡಿನ ನೀರಿನ ಘಟಕವನ್ನು ಎರಡು ದಿನದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. 19ನೇ ವಾರ್ಡಿನ ಘಟಕ ಲ್ಯಾಂಡ್‌ ಆರ್ಮಿಗೆ ಸಂಬಂಧಿಸಿದ್ದು ಅವರಿಗೆ ನೋಟಿಸ್‌ ನೀಡಿ ವ್ಯವಸ್ಥೆ ಮಾಡಿಕೊಡಲು ತಿಳಿಸಲಾಗಿದೆ. 19ನೇ ವಾರ್ಡಿನ ಘಟಕ ಪಪಂ ವ್ಯಾಪ್ತಿಗೆ ಒಳಪಟ್ಟಿಲ್ಲ. ನಮ್ಮ ವ್ಯಾಪ್ತಿಗೆ ಒಳಪಡಿಸಿದ ದಿನವೇ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
ಹಿಮಾಮ್‌ ಸಾಹೇಬ್‌,
ಕುಡುತಿನಿ ಪಪಂ ಮುಖ್ಯಾಧಿಕಾರಿ

ಸುಧಾಕರ್‌ ಮಣ್ಣೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next