Advertisement

ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ವಿರೋಧ

04:55 PM Dec 25, 2019 | Naveen |

ಕುರುಗೋಡು: ಪಟ್ಟಣ ಸಮೀಪದ ಯಲ್ಲಾಪುರ ನಂತರ ಮಧ್ಯಾಹ್ನ 2ಕ್ಕೆ ಹರಪನಹಳ್ಳಿಯಿಂದ ಶಿವಮೊಗ್ಗಕ್ಕೆ ಮರಳಲಿದ್ದಾರೆ. ಕ್ರಾಸ್‌ನಲ್ಲಿರುವ ಪವನ್‌ ವಸತಿ ಶಾಲೆ ಪಕ್ಕದಲ್ಲಿ ಪೆಟ್ರೋಲ್‌ ಬಂಕ್‌ ನಿರ್ಮಾಣವಾಗಲು ಸಿದ್ಧತೆ ನಡೆಯುತ್ತಿರುವುದನ್ನು ವಿರೋಧಿಸಿ ಮತ್ತು ಸಂಬಂಧಿಸಿದ ಅಧಿಕಾರಿಗಳು ಅದೇಶ ನೀಡದಂತೆ ಕ್ರಮ ವಹಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಶಾಲೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಶಾಲೆ ವ್ಯವಸ್ಥಾಪಕ ವಿಜಯ ಕುಮಾರ್‌ ಮಾತನಾಡಿ, ಈ ಶಾಲೆಯು 26 ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಯಲ್ಲಿದ್ದು, ಪ್ರಸ್ತುತ 800ಕ್ಕೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಕಾಂಪೌಂಡ್‌ನಿಂದ
10 ಅಡಿಯ ಪಕ್ಕದಲ್ಲಿರುವ ಸ್ಥಳದಲ್ಲಿ ಪೆಟ್ರೋಲ್‌ ಬಂಕ್‌ ನಿರ್ಮಾಣ ಮಾಡುವುದರಿಂದ ವಾಹನಗಳ ಕರ್ಕಶ ಶಬ್ದ, ಸ್ಫೋಟಕ ವಸ್ತು ಮಾರಾಟದಿಂದ ಮುಂದೆ ಅನಾಹುತ ಅಗುವ ಸಂಭವವಿದ್ದು ಆದ್ದರಿಂದ ಈಗಲೇ ಕಡಿವಾಣ ಹಾಕಬೇಕು. ಸರ್ಕಾರದ ನಿಯಮದ ಪ್ರಕಾರ ಕನಿಷ್ಠ 100 ಮೀಟರ್‌ ದೂರದಲ್ಲಿರಬೇಕು ಎನ್ನುವ ಅದೇಶವಿದ್ದರೂ, ಬಿಪಿಸಿಎಲ್‌ ಸಂಸ್ಥೆಯು ಶಾಲೆಯ ಕೂಗಳತೆಯಲ್ಲಿರುವ ಸ್ಥಳದಲ್ಲಿ ಪೆಟ್ರೋಲ್‌ ಬಂಕ್‌ ತರೆಯಲು ಒಪ್ಪಂದ ನೀಡಿರುವುದು ಖಂಡನೀಯವಾಗಿದೆ.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಆಗ್ರಹಿಸಿದರು.

ಶಾಲೆ ಪ್ರಾಂಶುಪಾಲೆ ಅಪರ್ಣ ಮಾತನಾಡಿ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈಗಾಗಲೇ ತಹಶೀಲ್ದಾರ್‌ರಿಗೆ, ಪೊಲೀಸ್‌ ಠಾಣೆಗೆ, ಅಗ್ನಿಶಾಮಕ ದಳದ ಅಧಿ ಕಾರಿಗಳಿಗೆ ನೀಡಿದ್ದೇವೆ. ಶಾಲೆ ಪಕ್ಕದಲ್ಲಿ ಸ್ಥಾಪಿಸುವ ಪೆಟ್ರೋಲ್‌ ಬಂಕ್‌ ವಿರೋ ಧಿಸಿ ವಿದ್ಯಾರ್ಥಿಗಳ ಪೋಷಕರು 700ಕ್ಕೂ ಹೆಚ್ಚು ತಕರಾರು ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಿದ್ದು ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾ ಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಡಿ. 27 ಶುಕ್ರವಾರದಂದು ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಪೋಷಕರೊಂದಿಗೆ ಶಾಲೆ ಆವರಣದಿಂದ ಕುರುಗೋಡು ಮುಖ್ಯವೃತ್ತದ ಮೂಲಕ ತಹಶೀಲ್ದಾರ್‌ರ ಕಚೇರಿವರೆಗೆ ಪಾದಯಾತ್ರೆಯಿಂದ ಶಾಂತಿಯುತವಾಗಿ ಹೋರಾಟ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಹಾಗಾಗಿ ಶಾಲೆ ಮುಂದುಗಡೆ ಪೆಟ್ರೋಲ್‌ ಬಂಕ್‌ ತೆರೆಯುವುದನ್ನು ಸ್ಥಗಿತಗೊಳಿಸಬೇಕು ಎಂದರು. ವಿದ್ಯಾರ್ಥಿಗಳು ಬೇಡ ಬೇಡ ಪೆಟ್ರೋಲ್‌ ಬಂಕ್‌ ಬೇಡ ಶಾಲೆಯ ಮುಂದುಗಡೆ ಸ್ಫೋಟಕ ವಸ್ತು ಮಾರಾಟ ಇದರಿಂದ ನಮಗೆ ಆಪಾಯ ತಪ್ಪಿದ್ದಲ್ಲ ಎಂದು ಘೋಷಣೆಗಳನ್ನು ಕೂಗಿದರು.

Advertisement

ಶಾಲೆ ಕಾರ್ಯದರ್ಶಿ ತರಂಗಿಣಿ, ಎಸ್‌. ಸಾಗರ್‌, ಶಿಕ್ಷಕರಾದ ಸಿದ್ದಿಸಾಬ್‌, ಸೂಗುರೇಶ್‌, ಬಾಷಾ, ಜಾಫರ್‌, ಪ್ರಮೋದ್‌, ರಾಜಬಕ್ಷಿ, ನಭಿಸಾಬ್‌, ಅಜಯಕುಮಾರ್‌, ಮೀನಾಕ್ಷಿ, ಗೀತಾ, ವಿಯಕುಮಾರಿ, ಶಕುಂತಲಾ ಸೇರಿದಂತೆ ಇನ್ನಿತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next