Advertisement
ಆದರೂ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಬಂದು ಬರೀ ಸುಳ್ಳು ಭರವಸೆ ನೀಡುತ್ತಿದ್ದಾರೆಯೆ ಹೊರತು ಸಮಸ್ಯೆ ಆಲಿಸಲು ಮುಂದಾಗುತ್ತಿಲ್ಲ ಎಂದು ಪ್ರತಿಭಟನೆಯಲ್ಲಿ ನಿರತರಾಗಿರುವ ಸಂತ್ರಸ್ತರು ಆಕ್ರೋಶ ಹೊರಹಾಕಿದರು.
Related Articles
Advertisement
ಪ್ರತಿಭಟನೆ 56ನೇ ದಿನಕ್ಕೆ ಕಾಲಿಟ್ಟರೂ ಕೂಡಾ ಸಂಸದ ವೈ. ದೇವೇಂದ್ರಪ್ಪ ಅವರು ಒಂದು ದಿನ ಕೂಡ ರೈತರ ಪ್ರತಿಭಟನೆ ಕಡೆಗೆ ತಲೆ ಹಾಕದೆ ಸಮಸ್ಯೆಗಳ ಅಹವಾಲು ಸ್ವೀಕರಿಸದೆ ಇರುವುದು ಶೋಭೆಯಲ್ಲ ಎಂದು, ದೇವೇಂದ್ರಪ್ಪ ರೈತ ವಿರೋಧಿ ಎಂದು ಪ್ರತಿಭಟನೆಯಲ್ಲಿ ಘೋಷಣೆ ಕೂಗಿದರು. ಆದ್ದರಿಂದ ರೈತರ ಬೇಡಿಕೆಗಳು ಈಡೇರುವವರೆಗೂ ನ್ಯಾಯ ಸಿಗುವವರೆಗೆ ಹೋರಾಟ ಕೈ ಬಿಡುವ ಪ್ರಶ್ನೆಯೆ ಇಲ್ಲ ಎಂದರು.
ಕುಡಿತಿನಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಖಾನೆಗಳಿಗೆ ಭೂಮಿ ನೀಡಿ 13 ವರ್ಷ ಕಳೆದಿದೆ. ಯಾವುದೇ ಕಾರ್ಖಾನೆ ಸ್ಥಾಪನೆಯಾಗದ ಹಿನ್ನೆಲೆಯಲ್ಲಿ ಮಾಲಿಕರ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.
ಇದರ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸಾಂತ್ವನ ಹೇಳುವ ಸೌಜನ್ಯ ಕೂಡ ಇಲ್ಲದಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.