ಕುರುಗೋಡ: ಕಳೆದ ಮೂರು ನಾಲ್ಕು ದಿನಗಳಿಂದ ರಾತ್ರಿಯಿಡಿ ಸುರಿದ ಮಳೆಯಿಂದ ತುಂಗಭದ್ರಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಪರಿಣಾಮ ಸಮೀಪದ ಮಣ್ಣೂರು ಗ್ರಾಮದ ಸಾರ್ವಜನಿಕ ರುದ್ರಭೂಮಿ ನದಿ ದಡದಲ್ಲಿ ಇರುವುದರಿಂದ ಅರ್ಧದಷ್ಟು ಜಾಲವೃತಗೊಂಡ ಹಿನ್ನಲೆ ತುಂಬಾ ತೆಪ್ಪಗಳು ಹಾಗೂ ಜಂಗಲ್ ಕಟಿಂಗ್ ಗಳಿಂದ ಬೆಳೆದು ನಿಂತಿದೆ.
ಗ್ರಾಮದಲ್ಲಿ ಯಾರಾದ್ರೂ ನಿಧನ ಹೊಂದಿದರೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಮಣ್ಣೂರು ಗ್ರಾಮದಲ್ಲಿ ವೃದ್ದೆ ಒಬ್ಬರು ನಿಧನರಾದ ಹಿನ್ನಲೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಪಕ್ಕದಲ್ಲಿ ನೀರು ಹರಿಯುತ್ತಿದ್ದು, ಇನ್ನೂ ಉಳಿದ ಜಾಗದಲ್ಲಿ ಎಲ್ಲೆಂದರಲ್ಲಿ ತೆಪ್ಪಗಳು, ಜಂಗಲ್ ಕಟಿಂಗ್ಸ್ ಗಳು ಬೆಳೆದು ನಿಂತಿದ್ದು ಸ್ವಚ್ಛತೆ ಇಲ್ಲದಾಗಿದೆ.
ಇದರಿಂದ ಗ್ರಾಮದಲ್ಲಿ ಯಾರೇ ನಿಧಾನರಾದವರನ್ನು ಅಂತ್ಯ ಸಂಸ್ಕಾರ ಮಾಡಲು ಹೊರಟರೆ ಗ್ರಾಪಂ ಹಿಡಿ ಶಾಪ ಹಾಕುತ್ತಾ ಅಂತ್ಯ ಸಂಸ್ಕಾರ ಮಾಡಿ ಬರಬೇಕಾಗಿದೆ.
ಇದರ ಒಂದು ಪರಿಸ್ಥಿತಿ ನೋಡಿ ಶುಕ್ರವಾರ ವೃದ್ದೆ ಒಬ್ಬರ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರೆ ಸ್ವತಃ ರುದ್ರಭೂಮಿಯನ್ನು ಟ್ರ್ಯಾಕ್ಟರ್ ಮೂಲಕ ಸ್ವಚ್ಛ ಮಾಡಿ ಅಂತ್ಯ ಸಂಸ್ಕಾರ ನೆರೆವೇರಿಸಲು ಮುಂದಾದ ಘಟನೆ ನಡೆದಿದೆ.
ಪಕ್ಕದಲ್ಲೇ ಗ್ರಾಪಂ ಇದ್ದು, ಬಹಳ ದಿನಗಳಿಂದ ಇದೆ ತರ ಇದೆ. ಅಂತ್ಯ ಸಂಸ್ಕಾರ ಮಾಡಲು ಹೋಗುವರಿಗೆ ಸರಿಯಾದ ರಕ್ಷಣೆ ಇಲ್ಲದಾಗಿದೆ ಈಗಲಾದರೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಇತ್ತ ಕಡೆ ಭೇಟಿ ನೀಡಿ ಸ್ವಚ್ಛ ಗೊಳಿಸಲು ಮುಂದಾಗಬೇಕಿದೆ.